HomeGadag Newsಗರ್ಭ ಕಂಠದ ಕ್ಯಾನ್ಸರ್ ತಡೆಗಟ್ಟಬಹುದು

ಗರ್ಭ ಕಂಠದ ಕ್ಯಾನ್ಸರ್ ತಡೆಗಟ್ಟಬಹುದು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸುಲಭವಾಗಿ ತಡೆಗಟ್ಟಬಹುದಾದ ಗರ್ಭ ಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರನ್ನು ಬಲಿ ತೆಗೆದುಕೊಳ್ಳುವ ಎರಡನೇ ಅತಿದೊಡ್ಡ ಕ್ಯಾನ್ಸರ್ ಕೊಲೆಗಾರನಾಗಿ ಮುಂದುವರೆದಿದೆ. ಪ್ರತಿ ವರ್ಷ ಸುಮಾರು 124,000 ಹೊಸ ಪ್ರಕರಣಗಳು ಪತ್ತೆಯಾಗುತ್ತವೆ ಮತ್ತು ಭಾರತದಲ್ಲಿಯೇ ಸುಮಾರು 77 ಸಾವಿರ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಸಾಯುತ್ತಾರೆ ಎಂದು ಡಾ. ಶಿಲ್ಪಾ ದಢೂತಿ ತಿಳಿಸಿದರು.

ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ ಹಾಗು ಒಂ ಮಹಿಳಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕ್ಲಬ್‌ನ ಅಧ್ಯಕ್ಷೆ ನಾಗರತ್ನ ಮಾರನಬಸರಿ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ  ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ಹೂಡಿಕೆಯಲ್ಲಿ ಜಾಗತಿಕ ಬದ್ಧತೆಯ ಕರೆ ನೀಡಿದೆ. ವಿಶೇಷವಾಗಿ ಸೀಮಿತ ಸೆಟ್ಟಿಂಗ್‌ಗಳನ್ನು ಹೊಂದಿರುವ ಸಮುದಾಯಗಳಲ್ಲಿ ಮೇ 2018ರಲ್ಲಿ, ಮಹಾನಿರ್ದೇಶಕರು ಗರ್ಭಕಂಠದ ಕ್ಯಾನ್ಸರ್‌ನ್ನು ತೊಡೆದುಹಾಕಲು ಕ್ರಮಕ್ಕಾಗಿ ಜಾಗತಿಕ ಕರೆಯನ್ನು ಘೋಷಿಸಿದರು. ಈ ಕ್ಯಾನ್ಸರ್‌ನ್ನು ನಿರ್ಮೂಲನೆ ಮಾಡಲು ಈಗ ಲಭ್ಯವಿರುವ ಸಾಧನಗಳ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೆ.ಎಲ್.ಇ ಸಂಸ್ಥೆಯ ಕಲಾ-ವಾಣಿಜ್ಯ ಮಹಾವಿದ್ಯಾಲಯದ ಗೃಹ-ವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗರ್ಭಕಂಠದ ಕ್ಯಾನ್ಸರ್ ಕುರಿತು ಮಾಹಿತಿ ಕರಪತ್ರವನ್ನು ಕಾರ್ಯಕ್ರಮದಲ್ಲಿ ಹಂಚಿದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಗೃಹ-ವಿಜ್ಞಾನ ವಿಭಾಗದ ಉಪನ್ಯಾಸಕರಾದ ಪ್ರೊ. ವೀಣಾ ತಿರ್ಲಾಪೂರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇನ್ನರ್‌ವೀಲ್ ಕ್ಲಬ್ ಸಹ ಕಾರ್ಯದರ್ಶಿ ಜ್ಯೋತಿ ದಾನಪ್ಪಗೌಡರ ನೀರೂಪಿಸಿ, ವಂದಿಸಿದರು. ಐಎಸ್‌ಓ ಪುಷ್ಪಾ ಭಂಡಾರಿ, ಪ್ರತಿಭಾ ಭದ್ರಶೆಟ್ಟಿ, ಪ್ರೇಮಾ ಹಂದಿಗೋಳ್, ರಾಜರಾಜೇಶ್ವರಿ ಬಳ್ಳಾರಿ, ಅನ್ನಪೂರ್ಣ ವರವಿ, ಪ್ರೇಮಾ ಮೇಟಿ, ಸುಮಾ ಪಾಟೀಲ, ನೀಲಾಂಬಿಕಾ ಉಗಲಾಟದ, ಶಾಂತಾಗೌಡರ ಮುಂತಾದವರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!