ಸಿಇಟಿ ಫಲಿತಾಂಶ ಪ್ರಕಟ: ಈ ಬಾರಿ ಭವೇಶ್ ಜಯಂತಿ ಟಾಪರ್ – ಈ ಲಿಂಕ್ ಮೂಲಕ ನಿಮ್ಮ ರಿಸಲ್ಟ್ ತಿಳಿಯಿರಿ..!

0
Spread the love

ಬೆಂಗಳೂರು: ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ 2025)ರ ಫಲಿತಾಂಶ ಇಂದು ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರು ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.

Advertisement

ಕೆಇಎ ಕಚೇರಿಯಲ್ಲಿ ಬೆಳಗ್ಗೆ ಕರೆಯಲಾದ ಮಾಧ್ಯಮಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರು ಸಿಇಟಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳ ವಿವರಗಳು ಮತ್ತು ಪರೀಕ್ಷೆಯಲ್ಲಿ ತೇರ್ಗಡೆಯಾದ ಶೇಕಡಾವಾರು ಮಾಹಿತಿಗಳನ್ನು ನೀಡಿದ್ದಾರೆ.

2025/26 ಸಾಲಿನ ಸಿಇಟಿ ಪರೀಕ್ಷೆಗೆ ಸುಮಾರು 3 ಲಕ್ಷ 30 ಸಾವಿರ ವಿದ್ಯಾರ್ಥಿಗಳು ಅರ್ಜಿ ಹಾಕಿದ್ರು. ಅದರಲ್ಲಿ ಪರೀಕ್ಷೆಗೆ 3 ಲಕ್ಷ 11 ಸಾವಿರ 91 ಹಾಜರಾಗಿದ್ದರು.ರಸಾಯನಶಾಸ್ತ್ರ 3 ಲಕ್ಷ 11 ಸಾವಿರ 762, ಗಣಿತಶಾಸ್ತ್ರ 3 ಲಕ್ಷ 4 ಸಾವಿರ 170, ಜೀವಶಾಸ್ತ್ರ 2 ಲಕ್ಷ 39 ಸಾವಿರದ 459 ಮಂದಿ ಹಾಜರಾಗಿದ್ದರು. ಭೌತಶಾಸ್ತ್ರಕ್ಕೆ ಮಾತ್ರ ಒಂದು ಅಂಕ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಈ ಬಾರಿಯ ಸಿಇಟಿಯಲ್ಲಿ 2 ಲಕ್ಷ 62 ಸಾವಿರದ 195 ಮಂದಿ ಇಂಜಿನಿಯರ್ ರ್ಯಾಂಕಿಂಗ್ ಪಡೆದಿದ್ದಾರೆ.

ಮೊದಲ Rank ಯಾರು?
ಕರ್ನಾಟಕ ಚೈತನ್ಯ ಟೆಕ್ನೋ ಸ್ಕೂಲ್‌ನ ವಿದ್ಯಾರ್ಥಿ ಭವೇಶ್ ಜಯಂತಿ ಅವರು ಶೇಕಡಾ 99.06ರಷ್ಟು ಅಂಕದೊಂದಿಗೆ ಇಂಜಿನಿಯರಿಂಗ್‌ನಲ್ಲಿ ಮೊದಲ Rank ಪಡೆದಿದ್ದಾರೆ. ಸಾತ್ವಿಕ್ ಬಿ. ಬಿರಾದರ್ ಅವರು ಶೇಕಡಾ 98.83 ಅಂಕದೊಂದಿಗೆ 2ನೇ Rank ಗಳಿಸಿದ್ದಾರೆ.

B- ಫಾರ್ಮ್
ಪ್ರಥಮ – ಆತ್ರೆಯಾ ವೆಂಕಟಚಲಂ
ದ್ವಿತೀಯ – ಭವೇಶ್ ಜಯಂತಿ
ತೃತೀಯ – ಹರೀಶ್ ರಾಜ್ .ಡಿ.ವಿ

ಅಗ್ರಿಕಲ್ಚರ್
ಪ್ರಥಮ – ಅಕ್ಷಯ್ ಎಂ
ದ್ವಿತೀಯ – ಸಾಯಿಶ್ ಶರವಣ ಪಂಡಿತ್
ತೃತೀಯ – ಸುಚಿತ್.ಪಿ. ಪ್ರಸಾದ್

ಪಶುವೈದ್ಯಕೀಯ rank
ಪ್ರಥಮ- ಹರೀಶ್ ರಾಜ್
ದ್ವಿತೀಯ- ಆತ್ರೆಯಾ ವೆಂಕಟಚಲಂ
ತೃತೀಯ- ಸಫಲ್ ಎಸ್ ಶೆಟ್ಟಿ

ಲಿಂಕ್ ಮೂಲಕ ರಿಸಲ್ಟ್ನೋಡಿ

(1) https://t.co/TLplrLc0qv

(2) https://t.co/7q9hak7Y9z

(3) https://x.com/CMofKarnataka

(4) https://x.com/drmcsudhakar

(5) https://x.com/KEA_karnataka

ಈ ಲಿಂಕ್​ಗಳಲ್ಲಿ ಮೂಲಕ ವೆಬ್ ಸೈಟ್​ಗೆ ಹೋಗಿ ಸಿಇಟಿ ರಿಸಲ್ಟ್ ನೋಡಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here