ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಮೊದಲ ಪ್ರಧಾನಿ ಪಂಡಿತ ಜವಾಹರ್‌ಲಾಲ ನೆಹರು ಅವರು ಆಧುನಿಕ ಭಾರತದ ನಿರ್ಮಾತೃವಾಗಿದ್ದು, ಅವರ ದೂರದೃಷ್ಟಿಯ ಆಡಳಿತದಿಂದಲೇ ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿಗೆ ಸೇರಲು ಸಾಧ್ಯವಾಯಿತು ಎಂದು ಪ್ರಾಚಾರ್ಯ ವಾಯ್. ಎಸ್. ಮತ್ತೂರ ಹೇಳಿದರು.
ಇಲ್ಲಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ದೇಶ್ವರ ವಿಜ್ಞಾನ ವಾಣಿಜ್ಯ ಹಾಗೂ ಕಲಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನ್ಯಾಸಕರಾದ ಭಾಗ್ಯಲಕ್ಷ್ಮೀ ಚವಡಿ, ಜವಾಹರಲಾಲ್ ನೇಹರುವರ ಜೀವನ ಮತ್ತು ಸಾಧನೆ ಕುರಿತು ಮಾತಾಡಿದರು. ಮತ್ತೋರ್ವ ಉಪನ್ಯಾಸಕರಾದ ಪ್ರತಿಭಾ ಆರ್ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಪ್ರಜೆಗಳು ಎಂದು ತಿಳಿಸಿ, ಹೇಗೆ ವಿದ್ಯಾರ್ಥಿ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜಾನಪದ, ಭಾವಗೀತೆ, ಏಕಪಾತ್ರಾಭಿನಯ ಮತ್ತು ನೃತ್ಯದಲ್ಲಿ ಭಾಗವಹಿಸಿದ್ದರು. ಉಮಾ ನಾಯ್ಕಲ್ ವಚನಗೀತೆ ಹಾಡಿದರು, ಉಪನ್ಯಾಸಕರಾದ ಅಮೀತ ಬುವಾ ಸ್ವಾಗತಿಸಿದರು. ಕಾರ್ತಿಕ ಪೊಲೀಸ್‌ಪಾಟೀಲ ನಿರೂಪಿಸಿದರು. ಶ್ವೇತಾ ನಿಲುಗಲ್ ವಂದಿಸಿದರು.


