ಚಿತ್ರದುರ್ಗ:- ಚಿತ್ರದುರ್ಗದಲ್ಲಿ ಚಡ್ಡಿ ಗ್ಯಾಂಗ್ ಆಕ್ಟೀವ್ ಆಗಿದ್ದು, ಮಧ್ಯ ರಾತ್ರಿ ಕೈಯ್ಯಲ್ಲಿ ಮಾರಕಾಸ್ತ್ರ ಹಿಡಿದು ದರೋಡೆಗೆ ವಿಫಲ ಯತ್ನ ನಡೆಸಿದೆ.
ತಡರಾತ್ರಿ ಸುಮಾರು 6 ಜನ ಇರುವ ಕಳ್ಳರ ಗ್ಯಾಂಗ್ ಒಂದು, ಮನೆಯ ಬಾಗಿಲ ಬೀಗ ಮುರಿದು ಒಳ ನುಗ್ಗಿ ಮನೆಯಲ್ಲಿದ್ದ ಇತರೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಮನೆಯಲ್ಲಿ ಏನೂ ಸಿಗದ ಹಿನ್ನೆಲೆ 700 ರೂ ಕದ್ದು ಪರಾರಿ ಆಗಿದ್ದಾರೆ.
ಚಿತ್ರದುರ್ಗ ನಗರದ ಚಳ್ಳಕೆರೆ ನಗರದ ಜಾಫರ್ ಶರೀಫ್ ಬಡಾವಣೆಯಲ್ಲಿ ಈ ಘಟನೆ ಜರುಗಿದೆ. ಬಡಾವಣೆಯ ಜಯಶೀಲ ರೆಡ್ಡಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಚಡ್ಡಿ ಗ್ಯಾಂಗ್ ನ ಚಲನ ವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಳ್ಳಕೆರೆ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



