ವಿಜಯಸಾಕ್ಷಿ ಸುದ್ದಿ, ಗದಗ : ನಗದರಲ್ಲಿ ಸರ ಕಳ್ಳತನ ಮಾಡುತ್ತಿದ್ದ ಆರೋಪಿತನನ್ನು ಬಂಧಿಸಿ, ಆತನಿಂದ ಬಂಗಾರದ ಆಭರಣ ಸೇರಿದಂತೆ ಒಟ್ಟು 1 ಲಕ್ಷ 50 ಸಾವಿರ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Advertisement
ಗದಗ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ, ಗದಗ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಎಂ.ಬಿ. ಸುಂಕದ, ಗದಗ ಉಪ ವಿಭಾಗದ ಉಪ ಅಧೀಕ್ಷಕ ಜೆ.ಎಚ್. ಇನಾಮದಾರ ಮಾರ್ಗದರ್ಶನದಲ್ಲಿ ಬೆಟಗೇರಿ ವೃತ್ತ ಸಿಪಿಐ ಧೀರಜ್ ಶಿಂಧೆ, ಮುಳಗುಂದ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ, ಬೆಟಗೇರಿ ಠಾಣಾ ಪಿಎಸ್‌ಐ ನೂರಜಾನ ಸಾಬರ, ಎಸ್.ಬಿ. ಜಾಂಬೋಟಿ, ಬಿ.ಎಫ್. ಯರಗುಪ್ಪಿ, ಎಸ್.ಎ. ಗುಡ್ಡಮಠ, ಐ.ಎ. ಮಿರ್ಜಾ, ಪಿ.ಆರ್. ರಾಠೋಡ, ಎಂ.ಎಸ್. ಗಾಣಿಗೇರ, ಎಸ್.ಡಿ. ಬಳ್ಳಾರಿ, ಎಂ.ಎಫ್. ಅಸೂಟಿ, ಸಿ.ಎನ್. ಮಾದರ, ಪಿ.ಎಸ್. ದೊಡ್ಡಮನಿ, ಅಶೋಕ ಗದಗ, ನಾಗರಾಜ ಭರಡಿ, ಗುರು ಬೂದಿಹಾಳ ಕಾರ್ಯಾಚರಣೆ ಕೈಗೊಂಡಿದ್ದರು.