ದಾವಣಗೆರೆ: ರಾಜ್ಯ ಸರ್ಕಾರಕ್ಕೆ ರೈತರಿಗಿಂತ ಕುರ್ಚಿಯೇ ಮುಖ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ 3,400 ರೂ. ಕಬ್ಬಿಗೆ ಒಂದು ಟನ್ಗೆ ಬೆಲೆ ಇದೆ.ಆದರೆ, ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಡಿಮೆ ಬೆಲೆಗೆ ಕಬ್ಬು ಖರೀದಿ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ. ಅವರಿಗೆ ಕಾಳಜಿ ಇರೋದು ಕುರ್ಚಿ ಮೇಲೆ. ಕುರ್ಚಿಗಾಗಿ ಹೋರಾಟಕ್ಕೆ ಇಳಿದಿದ್ದಾರೆ. ರೈತರಿಗಿಂತ ಕುರ್ಚಿಯೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.
ಮೆಕ್ಕೆಜೋಳ ಖರೀದಿ ಕೇಂದ್ರ ಹಾಗೂ ಬೆಂಬಲ ಬೆಲೆಗೆ ನೀಡುವಂತೆ ದಾವಣಗೆರೆಯಲ್ಲಿ ನಾಳೆ ಹೋರಾಟ ಮಾಡಲಿದ್ದೇವೆ. ಕೇಂದ್ರ ಸರ್ಕಾರ ಈಗಾಗಲೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಸುತ್ತೋಲೆ ಕಳುಹಿಸಿದೆ. ಆದರೂ ಕೂಡ ಖರೀದಿ ಕೇಂದ್ರ ಪ್ರಾರಂಭ ಮಾಡದೆ ಬೆಂಬಲ ಬೆಲೆ ನೀಡದೆ ನಿರ್ಲಕ್ಷ್ಯ ವಹಿಸಿದೆ. ಬೆಳೆ ಹಾನಿ ಸಂದರ್ಭದಲ್ಲಿ ಕೂಡ ರೈತರಿಗೆ ಸರಿಯಾದ ರೀತಿ ಪರಿಹಾರ ರಾಜ್ಯ ಸರ್ಕಾರ ಕೊಟ್ಟಿಲ್ಲ ಎಂದರು.


