ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗೋವಿಂದ್ ಬಾಬು ಪೂಜಾರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಶೋ ನಿಂದ ಹೊರಬಂದು ಎಸಿಎಂಎಂ ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ 5 ಕೋಟಿ ರೂ. ವಂಚಿಸಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಬಿಗ್ ಬಾಸ್‌ನಿಂದ ಹೊರಬಂದು ಎಸಿಎಂಎಂ ನ್ಯಾಯಾಲಯದ ಮುಂದೆ ಅಟೆಂಡ್ ಆಗಿದ್ದಾರೆ.
Advertisement
ಚೈತ್ರಾ, ಶ್ರೀಕಾಂತ್ ಸೇರಿದಂತೆ ಮೂವರು ಕೋಟ್‌ಗೆ ಬಂದಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು 2025ರ ಜ.13ಕ್ಕೆ ಮುಂದಿನ ವಿಚಾರಣೆಗೆ ದಿನಾಂಕ ಸೂಚಿಸಿದ್ದಾರೆ. ಇನ್ನೂ ಹುಲಿ ಉಗುರು ಧರಿಸಿದ್ದ ಆರೋಪದಲ್ಲಿ ಈ ಹಿಂದೆ ವರ್ತೂರು ಸಂತೋಷ್ ಅವರು ಒಂದು ವಾರಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಆ ನಂತರ ಬಿಗ್ ಬಾಸ್‌ಗೆ ಬಂದಿದ್ದರು. ಅದೇ ರೀತಿ ಇದೀಗ ಮತ್ತೆ ಚೈತ್ರಾ ಕೂಡ ಬಿಗ್ ಬಾಸ್‌ಗೆ ಹೋಗ್ತಾರಾ? ಎಂದು ಕಾದುನೋಡಬೇಕಿದೆ.