ಬೆಂಗಳೂರು:- ಮೈಸೂರಿನಲ್ಲಿ ಸಚಿವ ಚಲುವರಾಯಸ್ವಾಮಿಗೆ ಹಲ್ಲೆ ನಡೆದಿದೆ ಎಂಬ HD ಕುಮಾರಸ್ವಾಮಿ ಆರೋಪಕ್ಕೆ DCM ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಮೈಸೂರಿನಲ್ಲಿ ಸಚಿವರಿಗೆ ಕಪಾಳಕ್ಕೆ ಹೊಡೆಯಲಾಗಿದೆ ಎಂಬ ಹೆಚ್‌ಡಿ ಕುಮಾರಸ್ವಾಮಿ ಆರೋಪ ಸುಳ್ಳು. ಅವರಿಗೂ ಹಿಡಿದು ಯಾರೋ ಕಪಾಳಕ್ಕೆ ಹೊಡೆದರು ಎಂದು ನನಗೂ ಯಾರೋ ಹೇಳಿದರು. ಅದಕ್ಕೆ ಆಧಾರ ಇದೆಯಾ? ಯಾರಿಗೋ ಮೋಸ ಮಾಡಿದ್ದಾರಂತೆ, ಅವರಿಗೂ ಕಪಾಳಕ್ಕೆ ಹೊಡೆದರಂತೆ ಎಂದು ನನಗೂ ಹೇಳಿದರು. ಯಾರೋ ಹೇಳಿದರು ಎಂದು ಅದನ್ನು ನಾನು ನಂಬೋಕಾಗುತ್ತಾ, ಹೇಳೋಕಾಗುತ್ತಾ? ಯಾವ ಸಚಿವರು ಹೊಡೆದು ಇಲ್ಲಾ ಏನೂ ಇಲ್ಲಾ. ಬರಿ ಹಿಟ್ ಅಂಡ್ ರನ್ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕ ಸರ್ಕಾರ 700 ಕೋಟಿ ಸಂಗ್ರಹ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ರಾಜಕೀಯವಾದ ಆರೋಪ. ಆರೋಪ ಸಾಬೀತು ಪಡಿಸಿದರೆ ಸಣ್ಣ ಶಿಕ್ಷೆಗೂ ಗುರಿಯಾಗುತ್ತೇವೆ. ದೊಡ್ಡ ಹುದ್ದೆಯಲ್ಲಿರುವವರು ಆಧಾರ ಇಲ್ಲದೇ ಆರೋಪ ಮಾಡಬಾರದು ಎಂದಿದ್ದಾರೆ.