ಚಾಮರಾಜನಗರ:- ತಾಲೂಕಿನ ಹೊಮ್ಮ–ಬಸವರಾಜಪುರ ಬಳಿ ಚಿರತೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ದೊರೆಸ್ವಾಮಿಯನ್ನು ಬಂಧಿಸಿದ್ದಾರೆ.
ಚಿರತೆಯು, ಆರೋಪಿಗೆ ಸೇರಿದ ನಾಯಿ ಹಾಗೂ ಜಾನುವಾರುಗಳನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ, ಕರುವಿನ ಮಾಂಸಕ್ಕೆ ಕಾರ್ಬೋ ಪ್ಲೋರಾನ್ ಎಂಬ ಕ್ರಿಮಿನಾಶಕ ಬೆರೆಸಿ ವಿಷಪ್ರಶಾನ ಮಾಡಲಾಗಿದೆ ಎನ್ನಲಾಗಿದೆ. ವಿಷ ಬೆರೆಸಿದ ಮಾಂಸ ತಿಂದ ಪರಿಣಾಮ ಚಿರತೆ ಸಾವಿಗೀಡಾಗಿದ್ದು, ಘಟನೆಯ 24 ಗಂಟೆಗಳಲ್ಲಿ ಬಿಆರ್‌ಟಿ ಅರಣ್ಯ ಸಿಬ್ಬಂದಿ ಹಾಗೂ ಸಂತೇಮರಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ತನಿಖೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.



