ವಿಶ್ವ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಬದ್ಧ ಎದುರಾಳಿ ಪಾಕಿಸ್ತಾನದ ಜೊತೆ ಭಾರತೀಯ ತಂಡ ಮುಖಾಮುಖಿಯಾಗಲಿದೆ.
ಉಭಯ ತಂಡಗಳ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇತಿಹಾಸವನ್ನು ಕೆದಕಿ ನೋಡಿದಾಗ ಪಾಕಿಸ್ತಾನ ಸದ್ಯ ಮೊದಲಿನಂತೆ ಭರ್ಜರಿಯಾಗಿ ಆಡುತ್ತಿಲ್ಲ. ಅದರಲ್ಲೂ ಭಾರತದೊಂದಿಗೆ ಅದರ ಅಬ್ಬರ ಕಳಪೆಯೇ ಇದೆ.ಏಕದಿನ ಪಂದ್ಯಗಳಲ್ಲಿ ಭಾರತ ಪಾಕಿಸ್ತಾನದ ನಡುವೆ ಒಟ್ಟು 2018ರಿಂದ ನಡೆದ 73 ಪಂದ್ಯಗಳಲ್ಲಿ ಭಾರತ ಒಟ್ಟು 57 ಪಂದ್ಯಗಳಲ್ಲಿ ಗೆದ್ದು ಮುನ್ನಡೆಯಲ್ಲಿದೆ.ಆದ್ರೆ 2018 ರಿಂದ ಇಲ್ಲಿಯವರೆಗೂ ಈ ಉಭಯ ತಂಡಗಳು ಕೇವಲ 6 ಬಾರಿ ಮುಖಾಮುಖಿಯಾಗಿವೆ. ಈ ಆರು ಪಂದ್ಯಗಳಲ್ಲಿಯೂ ಭಾರತ ಭರ್ಜರಿ ವಿಜಯ ಸಾಧಿಸಿದೆ.
ಆದ್ರೆ ಚಾಂಪಿಯನ್ಸ್ ಟ್ರೋಫಿ ವಿಚಾರಕ್ಕೆ ಬಂದಾಗ ಪಾಕಿಸ್ತಾನ ಭಾರತ ವಿರುದ್ಧ 3 ಪಂದ್ಯಗಳನ್ನು ಜಯಿಸಿದ್ದರೆ. ಭಾರತ ಎರಡು ಪಂದ್ಯಗಳನ್ನು ಜಯಸಿದೆ. ಇದೆಲ್ಲದರ ನಡುವೆ ಇಂದು ನಡೆಯುವ ಮ್ಯಾಚ್ ಅತ್ಯಂತ ಪ್ರಮುಖವಾಗಿದೆ. ತಂಡದಲ್ಲಿ ಯಾವುದೇ ಬದಲಾವಣೆ ಆಗಿಲ್ಲವಾದರೂ ಕೂಡ ಕೆಲವು ದಿಗ್ಗಜ ಬ್ಯಾಟ್ಸಮನ್ಗಳ ಫಾರ್ಮ್ ಕೊರತೆ ಚಿಂತೆಗೀಡು ಮಾಡಿದೆ. ಇಡೀ ಭಾರತೀಯ ಕ್ರಿಕೆಟ್ ಪ್ರಿಯರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೇಲೆ ದೊಡ್ಡ ನಿರೀಕ್ಷೆಯನ್ನಿಟ್ಟುಕೊಂಡು ಕುಳಿತಿದ್ದಾರೆ. ಅವರು ಮತ್ತೆ ಫಾರ್ಮ್ನ್ನು ಸುಧಾರಿಸಿಕೊಂಡು ಹಳೆಯ ಅಬ್ಬರದ ಆಟವನ್ನು ಆಡಬೇಕಾದ ಅನಿವಾರ್ಯತೆ ಎದುರಾಗಿದೆ. ಇಂದಿನ ಪಂದ್ಯ ಅತ್ಯಂತ ಹೈವೋಲ್ಟೇಜ್ ಪಂದ್ಯವಾಗಿದ್ದು, ಕೋಟಿ-ಕೋಟಿ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ.