Champions Trophy: ತಂಡದ ಸಂಯೋಜನೆ ದೃಷ್ಟಿಯಿಂದ ‘ಸಿರಾಜ್’ ಕೈ ಬಿಡಲಾಗಿದೆ: ರೋಹಿತ್!

0
Spread the love

ತಂಡದ ಸಂಯೋಜನೆ ದೃಷ್ಟಿಯಿಂದ ಸಿರಾಜ್​ರನ್ನು ಕೈಬಿಡಲಾಗಿದೆ ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದಾರೆ.

Advertisement

ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ನಾಯಕ ರೋಹಿತ್ ಶರ್ಮಾ ನೇತೃತ್ವದ 15 ಸದಸ್ಯರ ತಂಡವನ್ನು ಮುಖ್ಯ ಆಯ್ಕೆ ಮಂಡಳಿ ಇಂದು ಘೋಷಿಸಿದೆ. ಈ ಮೊದಲು ನಿರೀಕ್ಷಿಸಿದ ಹೆಸರುಗಳೇ ತಂಡದಲ್ಲಿದ್ದರೂ ವೇಗಿ ಮೊಹಮ್ಮದ್ ಸಿರಾಜ್​ರನ್ನು ತಂಡದಿಂದ ಕೈಬಿಟ್ಟಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಇದೇ ವಿಚಾರವಾಗಿ ಮಾತನಾಡಿದ ರೋಹಿತ್ ಶರ್ಮಾ, ನಾವು ಹೊಸ ಚೆಂಡಿನಲ್ಲಿ ಮತ್ತು ಚೆಂಡು ಹಳೆಯದಾದ ಬಳಿಕವೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲ ವೇಗಿಯನ್ನು ಎದುರು ನೋಡುತ್ತಿದ್ದೇವು. ಸಿರಾಜ್ ಹೊಸ ಚೆಂಡಿನ ಬೌಲರ್. ಆದರೆ ಹಳೆಯ ಚೆಂಡಿನೊಂದಿಗೆ ಅವರ ಅಷ್ಟು ಪರಿಣಾಮಕಾರಿಯಲ್ಲ. ಇದು ದುಬೈನಲ್ಲಿ ನಮಗೆ ಹಿನ್ನಡೆಯನ್ನುಂಟುಮಾಡಬಹುದು. ಮತ್ತೊಂದೆಡೆ, ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದು, ಎಲ್ಲ ರೀತಿಯ ಎಸೆತಗಳನ್ನು ಬೌಲಿಂಗ್ ಮಾಡುವುದರಲ್ಲಿ ಅವರು ನಿಪುಣರು.

ಅರ್ಷದೀಪ್ ಸಿಂಗ್ ಆರಂಭಿಕ ಓವರ್‌ಗಳಲ್ಲಿ ಸ್ವಿಂಗ್ ಮತ್ತು ಡೆತ್ ಓವರ್‌ಗಳಲ್ಲಿಯೂ ತಮ್ಮ ಬೌಲಿಂಗ್ ಕಲೆಯನ್ನು ತೋರಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇದಲ್ಲದೆ ಜಸ್ಪ್ರೀತ್ ಬುಮ್ರಾ ಅವರನ್ನು ಮೂರನೇ ವೇಗಿಯಾಗಿ ತಂಡದಲ್ಲಿ ಇರಿಸಲಾಗಿದೆ. ಆದರೆ, ಪ್ರಸ್ತುತ ಅವರು ಗಾಯದಿಂದ ಬಳಲುತ್ತಿದ್ದು, ಬುಮ್ರಾ ಫಿಟ್ ಆಗದಿದ್ದರೆ ಹರ್ಷಿತ್ ರಾಣಾ ಅವರನ್ನು ಬದಲಿಯಾಗಿ ಆಯ್ಕೆ ಮಾಡಬಹುದು.

ತಂಡದಲ್ಲಿ ಮೂವರು ವೇಗಿಗಳಿಗೆ ಸ್ಥಳಾವಕಾಶವಿತ್ತು. ಸಿರಾಜ್ ಅವರ ಬಳಿ ನಮಗೆ ಬೇಕಾದ ಕೌಶಲ್ಯವಿರಲಿಲ್ಲ. ಆದ್ದರಿಂದ ಅವರ ಬದಲಿಗೆ ಹರ್ಷಿತ್ ರಾಣಾ ಅವರನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ರಾಣಾ ಸ್ವಲ್ಪ ವಿಭಿನ್ನವಾಗಿ ಬೌಲ್ ಮಾಡುತ್ತಾರೆ ಮತ್ತು ದುಬೈನಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಆದರೆ, ಸಿರಾಜ್​ರನ್ನು ತಂಡದಿಂದ ಕೈಬಿಟ್ಟಿರುವುದು ದುರದೃಷ್ಟಕರ. ಆದರೆ ತಂಡದ ಸಂಯೋಜನೆಯ ದೃಷ್ಟಿಯಿಂದಾಗಿ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ರೋಹಿತ್ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here