ಬೆಂಗಳೂರು:- ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಡಿಕೆಶಿ ಹೇಳಿಕೆಗೆ ಮಾಜಿ ಸಚಿವ ಅಶ್ವಥ್ ನಾರಾಯಣ್ ಖಂಡಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸೂಕ್ಷ್ಮತೆ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಂಡು ಉಪಮುಖ್ಯಮಂತ್ರಿಗಳು ಮಾತಾಡಬೇಕು.
ಜವಾಬ್ದಾರಿ ಮರೆತು ಮನಬಂದಂತೆ ಡಿಕೆಶಿ ಅವರು ಮಾತಾಡ್ತಿದ್ದಾರೆ. ಈಗಾಗಲೇ ಈ ವಿಚಾರದಲ್ಲಿ ಪ್ರಮೋದಾದೇವಿಯವ್ರು ಹಾಗೂ ಯದುವೀರ್, ಪ್ರತಾಪ್ ಸಿಂಹ ಮಾತಾಡಿದ್ದಾರೆ. ದಸರಾ ಸಾಂಸ್ಕೃತಿಕ ಹಬ್ಬವೂ ಹೌದು, ಧಾರ್ಮಿಕ ಹಬ್ಬವೂ ಹೌದು. ಕಾಂಗ್ರೆಸ್ ನವ್ರು ಎಲ್ಲಿ ಸೆಕ್ಯುಲರ್ ತೋರಿಸಬೇಕೋ ಅಲ್ಲಿ ತೋರಿಸಲಿ. ನಂಬಿಕೆ ಇಲ್ಲದವರಿಂದ ದಸರಾ ಉದ್ಘಾಟನೆ ಮಾಡಿಸಲು ಹೊರಟಿದ್ದಾರೆ.
ಎಲ್ಲ ಹಂತಗಳಲ್ಲೂ ಈ ಸರ್ಕಾರ ಅಪಪ್ರಚಾರಕ್ಕೆ ಕಾರಣ ಆಗಿದೆ. ಜನರ ಭಾವನೆಗಳಿಗೆ ಡಿಕೆಶಿ ನೋವು ತಂದಿದ್ದಾರೆ. ಚಾಮುಂಡಿ ಬೆಟ್ಟ ಮುಜರಾಯಿ ಇಲಾಖೆಗೆ ಬಂದಮೇಲೆ ಅದು ಹಿಂದೂಗಳ ಆಸ್ತಿ ಅಂತ ಆಯ್ತಲ್ಲ. ಯಾವುದೇ ಬೇರೆ ಧರ್ಮದವರು ಅಲ್ಲಿ ವಸ್ತುಗಳನ್ನು ಮಾರಾಟ ಮಾಡಲು ನಿರ್ಬಂಧ ಇದೆ.
ಇಷ್ಟೂ ಪರಿಜ್ಞಾನ ಡಿಕೆಶಿ ಅವರಿಗೆ ಇಲ್ವಾ? ಹೇಳಿಕೆ ಕೊಡುವಾಗ ಜವಾಬ್ದಾರಿಯಿಂದ ಕೊಡಲಿ. ಡಿಕೆಶಿ ಅವರು ಜನರ ಕ್ಷಮೆ ಕೋರಬೇಕು ಎಂದು ಆಗ್ರಹ ಮಾಡಿದ್ದಾರೆ