ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಕರಿಯಮ್ಮದೇವಿ 95ನೇ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಚಂಡಿ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Advertisement
ಅರ್ಚಕರಿಂದ ದೇವಿಯ ವಿವಿಧ ಬಗೆಯ ಕಾರ್ಯಕ್ರಮವನ್ನು ಶಂಕರ ಹಾನಗಲ್ಲ ಮತ್ತು ಪ್ರತಿಭಾ ಶಂಕರ ಹಾನಗಲ್ಲ ದಂಪತಿಗಳು, ವೀಣಾ ಚಂದ್ರಕಾಂತ ಹಾನಗಲ್ಲ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಾತ್ರಾ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಭಕ್ತಾಧಿಗಳು ಭಾಗವಹಿಸಿ ಶ್ರೀ ಕರಿಯಮ್ಮದೇವಿಯ ಕೃಪೆಗೆ ಪಾತ್ರರಾದರು.