ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ತಡರಾತ್ರಿ ಭೈರವೈಕ್ಯರಾಗಿದ್ದು, ನಾಥ ಪರಂಪರೆಯಂತೆ ಮಠದ ಆವರಣದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಅಂತಿಮ ಸಂಸ್ಕಾರದ ಮುನ್ನ ವಿಶೇಷ ಪೂಜೆ ನಡೆಯಿತು. ನಾಥ ಸಂಪ್ರದಾಯದಂತೆ ನಡೆದ ಪೂಜಾಕಾರ್ಯವನ್ನು ಶ್ರೀ ಭಾನುಪ್ರಕಾಶ್ ಗುರೂಜಿ ನೆರವೇರಿಸಿದರು.
Advertisement
ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಿರಾದ ಸ್ಫಟಿಕಪುರಿ ಮಠದ ಶ್ರೀ ನಂಜಾವಾಧೂತ ಸ್ವಾಮೀಜಿ, ಒಕ್ಕಲಿಗ ಮಹಾಸಂಸ್ಥಾನದ ಹಾಲಿ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಧರ್ಮಗುರುಗಳು ಹಾಗೂ ಗಣ್ಯರು ಹಾಜರಿದ್ದರು.