ಶಿವಮೊಗ್ಗ: ಸಿಎಂ ಸ್ಥಾನ ಬದಲಾವಣೆ ಆದ್ರೆ ನಮ್ಮ ಪಕ್ಷ, ರಾಜ್ಯದ ಜನರಲ್ಲಿ ಯಾವುದೇ ವ್ಯತ್ಯಾಸ ಆಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅದೇ ರೀತಿ ರಾಜ್ಯದ ಜನರಿಗೂ ಸಹ ವಿಶ್ವಾಸವಿಲ್ಲ. ಮುಂದಿನ ದಿನಗಳಲ್ಲಿ ಯಾವ ರೀತಿ ಸ್ಥಾನ ಪಲ್ಲಟ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.
Advertisement
ಇನ್ನೂ ಸಿಎಂ ಸ್ಥಾನ ಬದಲಾವಣೆ ಆದ್ರೆ ನಮ್ಮ ಪಕ್ಷಕ್ಕೂ ಹಾಗೂ ರಾಜ್ಯದ ಜನರಿಗೂ ಸಹ ವ್ಯತ್ಯಾಸವಾಗಲ್ಲ. 15ನೇ ಬಜೆಟ್ ಮಂಡನೆ ಮಾಡಿದ ಅನುಭವಿ ಸಿಎಂ ಸಿದ್ದರಾಮಯ್ಯನವರ ಆಡಳಿತ ವ್ಯವಸ್ಥೆ ಹೇಗೆ ಕುಸಿದು ಬಿದ್ದಿದೆ ಅಂದ್ರೆ ಹಣಕಾಸಿನ ಪರಿಸ್ಥಿತಿ ಕುಸಿದಿದ್ದು, ಯಾರೇ ಸಿಎಂ ಆಗಿ ಬಂದ್ರೂ ಸಹ ಅಭಿವೃದ್ದಿ ಸಾಧ್ಯವಿಲ್ಲ ಎಂಬಂತೆ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.