ಹುಬ್ಬಳ್ಳಿ:- ಚನ್ನಪಟ್ಟಣ ಅಭ್ಯರ್ಥಿ CP ಯೋಗೇಶ್ವರ್ ಆಗಬೇಕು ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಬ್ಯಾಟಿಂಗ್ ಮಾಡಿದ್ದಾರೆ.
Advertisement
ಈ ಸಂಬಂಧ ಮಾತನಾಡಿದ ಅವರು,ನಾವು ಗೆಲ್ಲಬೇಕು ಅಂದ್ರೆ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಬೇಕು. ಕರ್ನಾಟಕದಲ್ಲಿ ಮೂರು ಉಪಚುನಾವಣೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದಿದೆ ಎಂದರು.
ಜನರ ಮನಸ್ಸಿನಲ್ಲಿ ಯೋಗೇಶ್ವರ್ ಅಭ್ಯರ್ಥಿ ಆಗಬೇಕು ಅನ್ನೋ ಆಸೆ ಇದೆ. ಅವರೇ ಚನ್ನಪಟ್ಟಣ ಅಭ್ಯರ್ಥಿ ಆಗಬೇಕು. ಯೋಗೇಶ್ವರ್ ಎನ್‌ಡಿಎ ಅಭ್ಯರ್ಥಿ ಆಗಬೇಕು. ನಮ್ಮೆಲ್ಲರಿಗೂ ಯೋಗೇಶ್ವರ್ ಅವರನ್ನೇ ಅಭ್ಯರ್ಥಿ ಮಾಡಬೇಕು ಅನ್ನೋ ಒತ್ತಾಯ ಇದೆ. ನಾವೆಲ್ಲ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡುತ್ತೇವೆ. ಅಂತಿಮವಾಗಿ ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. ಹಾಗೇ ನೋಡಿದರೆ ಕುಮಾರಸ್ವಾಮಿ ಅವರೇ ಯೋಗಿಶ್ವರ್ ಅವರನ್ನು ಕರೆದು ಟಿಕೇಟ್ ನೀಡಬೇಕು ಎಂದು ಹೇಳಿದರು.


