ಬೆಳಗಾವಿ;-DCC ಬ್ಯಾಂಕ್ ಚುನಾವಣೆ ಕಣದಿಂದ ಚನ್ನರಾಜ್ ಹಟ್ಟಿಹೊಳಿ ಹಿಂದೆ ಸರಿದಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
ಈ ಬಗ್ಗೆ ಅಧಿಕೃತವಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಗೆ ಕಳೆದ ನಾಲ್ಕೈದು ತಿಂಗಳಿಂದ ಖಾನಾಪುರ ತಾಲೂಕಿನಿಂದ ಚನ್ನರಾಜ್ ಹಟ್ಟಿಹೊಳಿ ಕಣಕ್ಕಿಳಿಯಲು ತಯಾರಿ ನಡೆಸಿದ್ದರು. ಖಾನಾಪುರದ ಪಿಕೆಪಿಎಸ್ ನಿರ್ದೇಶಕರ ಮನ ಗೆಲ್ಲಲು ಚನ್ನರಾಜ್ ಯಶಸ್ವಿಯಾಗಿದ್ದರು ಜಿಲ್ಲೆಯ ರಾಜಕಾರಣ ಹಾಗೂ ರಾಜಕೀಯ ದೃಷ್ಟಿಯಿಂದ ಚನ್ನರಾಜ್ ಸ್ಪರ್ಧೆಯಿಂದ ಹಿಂಪಡೆಯಲಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಕಣದಿಂದ ಚನ್ನರಾಜ್ ಹಿಂದೆ ಸರಿದಿದ್ದೇಕೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.