ಶ್ರೀ ಹನುಮಾನ ಚಾಲೀಸ್ ಪಠಣ ಯಶಸ್ವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀಕ್ಷೇತ್ರ ಹೆಬ್ಬಳ್ಳಿಯ ಚೈತನ್ಯಾಶ್ರಮ ಇವರ ಅನುಗ್ರಹದಿಂದ ಶ್ರೀ ಶಂಕರ ಮಠ ಸೇವಾ ಸಮಿತಿ ಗದಗ ಇವರ ಸಹಯೋಗದೊಂದಿಗೆ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಮಾ.8 ಹಾಗೂ 9ರಂದು ನಗರದ ಶ್ರೀ ಶಂಕರ ಮಠದಲ್ಲಿ 11 ಗಂಟೆಗಳ ಅಖಂಡ ಶ್ರೀ ಹನುಮಾನ ಚಾಲೀಸ್ ಪಠಣ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

Advertisement

ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಗದಗ ಜಿಲ್ಲೆಯ ಸಮಸ್ತ ವಿಪ್ರ ಬಾಂಧವರಿಗೆ, ಸಹಾಯ-ಸಹಕಾರ ನೀಡಿದ ಶ್ರೀ ರಾಮದೇವರ, ಶ್ರೀಹನುಮಂತ ದೇವರ ಸಮಸ್ತ ಭಕ್ತರಿಗೆ, ಚೈತನ್ಯಾಶ್ರಮದ ಪರಮ ಪೂಜ್ಯ ಶ್ರೀ ದತ್ತಾವಧೂತ ಗುರುಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here