ಚಿಕ್ಕಮಗಳೂರು : ಗಣಪತಿ ವಿಸರ್ಜನೆ ವೇಳೆ ಕುಣಿಯುವ ವಿಚಾರಕ್ಕೆ ಗಲಾಟೆ ನಡೆದು ಯುವಕನ ಮೇಲೆ ಬ್ಲೇಡ್ ನಿಂದ ಹಲ್ಲೆ ಮಾಡಿರುವ ಘಟನೆ ಜರುಗಿದೆ.
23 ವರ್ಷದ ಗೌತಮ್ ಹಲ್ಲೆಗೊಳಗಾದ ಯುವಕ ಎನ್ನಲಾಗಿದ್ದು, ತಿಮ್ಮ ಎಂಬುವವನಿಂದ ಕೃತ್ಯ ನಡೆದಿದೆ. ಚಿಕ್ಕಮಗಳೂರು ನಗರದ ಗವನಗಳ್ಳಿಯಲ್ಲಿ ಘಟನೆ ಜರುಗಿದೆ.
ಸಧ್ಯ ಗಾಯಾಳು ಗೌತಮ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



