ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನಾದ್ಯಾಂತ ಅನ್ನದಾತರು ಸೋಮವಾರ ತಮ್ಮ ಬಂಧು-ಬಳಗದವರೊಂದಿಗೆ ಜಮೀನುಗಳಿಗೆ ತೆರಳಿ ಭೂ ತಾಯಿಗೆ ನಮಿಸಿ, ಸಂಭ್ರಮದಿಂದ ಚರಗ ಚೆಲ್ಲಿದರು.
ಎಳ್ಳ ಅಮವಾಸೆಯ ವಾರದ ಹಿಂದೆ ವಿವಿಧ ರಿತಿಯ ಸಿಹಿ ತಿನಿಸುಗಳನ್ನು ತಯಾರಿಸುವ ರೈತ ಮಹಿಳೆಯರು ಚರಗ ಚೆಲ್ಲಲು ಅಣಿಯಾಗುತ್ತಾರೆ. ಜಾತಿ-ಧರ್ಮಗಳ ಜಂಜಾಟಗಳಿಲ್ಲದೆ ಎಲ್ಲರೂ ಕೂಡಿಕೊಂಡು ಆಚರಿಸುವ ಹಬ್ಬ ಎಳ್ಳ ಅಮವಾಸ್ಯೆಯಾಗಿದ್ದು, ಬಿತ್ತನೆ ಮಾಡಿದ ಜಮೀನುಗಳಿಗೆ ತೆರಳುವ ಕೃಷಿಕರು ಬೆಳೆಗಳನ್ನು ನೊಡಿ ಹರ್ಷಗೊಳ್ಳುತ್ತಾರೆ. ಅಲ್ಲದೆ ಬೆಳೆಗಳು ಹುಲುಸಾಗಿ ಬರಲಿ ಎಂದು ಪಾಂಡವರನ್ನು ರಚಿಸಿ, ಪೂಜೆ ಸಲ್ಲಿಸಿ, ಬೆಳೆದ ಬೆಳೆ ಕೈಗೆ ಬರಲಿ ಎಂದು ಪ್ರಾರ್ಥಿಸುತ್ತಾರೆ.
ನಂತರ ಹಬ್ಬಕ್ಕೆ ಆಗಮಿಸಿದ ಬಂಧುಗಳು, ಸ್ನೇಹಿತರು ಹಾಗೂ ಅಕ್ಕ ಪಕ್ಕದ ಜಮೀನುಗಳ ರೈತರು ಸೇರಿಕೊಂಡು ಹಬ್ಬದೂಟ ಸವಿಯುತ್ತಾರೆ. ಜಮೀನುಗಳಿಗೆ ತೆರಳುವ ಮುನ್ನ ಎತ್ತಿನ ಬಂಡಿಗಳು ಸೇರಿದಂತೆ ವಾಹನಗಳನ್ನು ಸಿಂಗರಿಸಿಕೊAಡು ಹೊಗುವುದು ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುತ್ತದೆ.