ಅಂತರ ಧರ್ಮದ ವಿವಾಹಗಳ ದಾಖಲೆ ಪರಿಶೀಲಿಸಿ : ಎಸ್.ಕೆ. ಜಲರಡ್ಡಿ

0
Check records of interfaith marriages
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಉಪನೋಂದಣಿ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸದೆ ಅಂತರ ಧರ್ಮದ ವಿವಾಹಗಳು ನಡೆಯುತ್ತಿದ್ದು, ಇದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನಾ ತಾಲೂಕು ಘಟಕದ ವತಿಯಿಂದ ಉಪನೋಂದಣಾಧಿಕಾರಿ ಎಸ್.ಕೆ. ಜಲರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ತಾಲೂಕು ಸಂಚಾಲಕ ಈರಣ್ಣ ಪೂಜಾರ, ಯುವ ಮುಖಂಡ ಬಸವರಾಜ ಚಕ್ರಸಾಲಿ ಮಾತನಾಡಿ, ಇತ್ತೀಚೆಗೆ ಅಂತರ ಧರ್ಮದ ವಿವಾಹವು ಕೋಮು ಸ್ವರೂಪ ಪಡೆಯುತ್ತಿದ್ದು, ಗಲಭೆಗಳಿಂದ ಸಾಮರಸ್ಯ ಹಾಳುಗೆಡುತ್ತಿರುವ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ.

ಉಪನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿಗೆ ಬರುವವರ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ವಿವಾಹಗಳ ನೋಂದಣಿ ನಡೆಯುತ್ತಿರುವದು ಕಂಡು ಬಂದಿದೆ. ವಿವಾಹ ದಾಖಲೆಯ ಒಂದು ಪ್ರತಿಯನ್ನು ನೋಟೀಸ್ ಬೋರ್ಡ್ಗೆ ಲಗತ್ತಿಸದೆ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಲವ್ ಜಿಹಾದ್‌ನಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಸಬ್ ರಜಿಸ್ಟಾçರ್ ಕಚೇರಿಯಲ್ಲಿ ಮತಾಂತರ ತಡೆ-2022 ಕಾಯ್ದೆ ಸೇರಿದಂತೆ ಯಾವುದೇ ಕಾನೂನಿನ ಲೋಪಗಳು ಜರುಗದಂತೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದರು.

ಮನವಿ ಸ್ವೀಕರಿಸಿದ ಉಪನೋಂದಣಾಧಿಕಾರಿ ಎಸ್.ಕೆ. ಜಲರಡ್ಡಿ ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ನವೀನ ಬೆಳ್ಳಟ್ಟಿ, ರಾಮು ಪೂಜಾರ, ಅರುಣ ಮೆಕ್ಕಿ, ಮಂಜುನಾಥ ಕೊಡಳ್ಳಿ, ರಾಘು ಪುರೋಹಿತ, ಪ್ರಕಾಶ ಕಮಡೊಳ್ಳಿ, ಅರುಣ ಗೋಡಿ, ಕಿರಣ ಚಿಲ್ಲೂರಮಠ, ಅಮಿತ ಗುಡಗೇರಿ, ಮುತ್ತು ಕರ್ಜಕಣ್ಣನವರ, ಹರೀಶ ಕಟ್ಟಿಮನಿ, ಸಾಗರ ಅಳ್ಳಳ್ಳಿ, ಆದೇಶ ಸವಣೂರ, ಚಿನ್ನು ಹಾಳದೋಟದ, ವಿನಯ ಉಮಚಗಿ, ಪ್ರವೀಣ ಕುಂಬಾರ, ಹನುಮಂತ ರಾಮಗೇರಿ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here