HomeSports NewsIPL 2025: ಸತತ 5ನೇ ಸೋಲಿಗೆ ಶರಣಾದ ಚೆನ್ನೈ: ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು..?

IPL 2025: ಸತತ 5ನೇ ಸೋಲಿಗೆ ಶರಣಾದ ಚೆನ್ನೈ: ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು..?

For Dai;y Updates Join Our whatsapp Group

Spread the love

ಚೆನ್ನೈ ಸೂಪರ್ ಕಿಂಗ್ಸ್ ತಂಡವು 2025ರ ಐಪಿಎಲ್‌ನ 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತು. ಸ್ಯಾಮ್ ಕರನ್ ಅವರ 88 ರನ್‌ಗಳ ಅದ್ಭುತ ಇನ್ನಿಂಗ್ಸ್‌ನ ಹೊರತಾಗಿಯೂ, ಸಿಎಸ್‌ಕೆ 190 ರನ್‌ಗಳಿಗೆ ಸೀಮಿತವಾಯಿತು. ಪ್ರಭ್ಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ಸುಲಭ ಗೆಲುವು ಸಾಧಿಸಿತು. ಚಾಹಲ್ ಅವರ ಅದ್ಭುತ ಬೌಲಿಂಗ್ ಕೂಡ ಪಂಜಾಬ್ ಗೆಲುವಿಗೆ ಕಾರಣವಾಯಿತು. ಈ ಸೋಲಿನೊಂದಿಗೆ ಸಿಎಸ್‌ಕೆ ಪ್ಲೇ ಆಫ್‌ನಿಂದ ಹೊರಬಿತ್ತು.

ಈ ಸೋಲಿನ ಬಳಿಕ ಮಾತನಾಡಿದ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಿದ್ದೆವು. ಅದರಲ್ಲೂ ನಮ್ಮ ಬ್ಯಾಟಿಂಗ್ ಉತ್ತಮವಾಗಿತ್ತು. ಇದೇ ಮೊದಲ ಬಾರಿಗೆ ನಾವು ಸಾಕಷ್ಟು ರನ್​ಗಳಿಸಲು ಯಶಸ್ವಿಯಾದೆವು.

ಆದರೆ ಇದು ಉತ್ತಮ ಸ್ಕೋರ್ ಆಗಿತ್ತೇ ಎಂದು ಕೇಳಿದರೆ, ಖಂಡಿತವಾಗಿಯೂ ಅಲ್ಲ. ಅಂತಿಮ ಹಂತದಲ್ಲಿ ಸ್ಕೋರ್​ಗಳಿಸುವಲ್ಲಿ ನಾವು ಎಡವಿದೆವು. ಕೊನೆಯ ಓವರ್​ಗಳ ವೇಳೆ ಮತ್ತಷ್ಟು ರನ್​ಗಳಿಸಿದ್ದರೆ ಉತ್ತಮ ಪೈಪೋಟಿ ನೀಡಬಹುದಿತ್ತು ಎಂದು ಧೋನಿ ಹೇಳಿದ್ದಾರೆ.

ನಮ್ಮ ಪರ ಡೆವಾಲ್ಡ್ ಬ್ರೆವಿಸ್ ಮತ್ತು ಸ್ಯಾಮ್ ಕರನ್ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದರು. ಆದರೆ ಕೊನೆಯ 4 ಎಸೆತಗಳಿರುವಾಗಲೇ ನಾವು ಆಲೌಟ್ ಆಗಿದ್ದು ದುಬಾರಿಯಾಯಿತು. ಅಂತಿಮ ಹಂತದಲ್ಲಿ ನಾಲ್ವರು ಬ್ಯಾಟರ್​ಗಳು ವಿಕೆಟ್ ಒಪ್ಪಿಸಿದ್ದು ಸ್ಕೋರ್ ಕಡಿಮೆಯಾಗುವಂತೆ ಮಾಡಿತು.

ಇದಾಗ್ಯೂ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದ್ದವು. ಹೀಗಾಗಿ ಬೌಲರ್​ಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಿದ್ದೆವು. ಆದರೆ ನಮ್ಮ ಫೀಲ್ಡರ್​ಗಳು ಮಾಡಿದ ತಪ್ಪಿನಿಂದಾಗಿ ಸೋಲನುಭವಿಸಬೇಕಾಯಿತು. ನಾವು ಕೈ ಬಿಟ್ಟ ಕೆಲ ಕ್ಯಾಚ್​ಗಳು ಇಡೀ ಪಂದ್ಯದ ಮೇಲೆ ಪರಿಣಾಮ ಬೀರಿತು. ಕೈಚೆಲ್ಲಿದ ಕ್ಯಾಚ್​ಗಳಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಸೋಲನುಭವಿಸಬೇಕಾಯಿತು ಎಂದು ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!