ವಿಜಯಸಾಕ್ಷಿ ಸುದ್ದಿ, ಮುಳಗುಂದ: ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ವೀರ ರಾಣಿ ಕಿತ್ತೂರು ಚೆನ್ನಮ್ಮ ರಾಷ್ಟ್ರಮಾತೆ, ಸ್ವಾತಂತ್ರ್ಯಯುದ್ಧದ ಬೆಳ್ಳಿ ಚುಕ್ಕಿಯಾಗಿದ್ದಾರೆ ಎಂದು ರಾಮಣ್ಣಾ ಕಮಾಜಿ ಹೇಳಿದರು.
ಅವರು ಪಟ್ಟಣದ ವೀರ ರಾಣಿ ಕಿತ್ತೂರು ಚೆನ್ನಮ್ಮ ಸಹಕಾರಿ ಸಂಘದಲ್ಲಿ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ವೀರ ರಾಣಿ ಕಿತ್ತೂರು ಚೆನ್ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದು, ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯ ವಿಜಯ ನೀಲಗುಂದ ಗದಗ ಜಿಲ್ಲಾ ಯೋಜನಾ ಸಮಿತಿ ಸದಸ್ಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ನಿಮಿತ್ತ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆ.ಎಲ್. ಕರಿಗೌಡರ, ಶರಣಪ್ಪ ಕಮಾಜಿ, ರವಿ ಬಳಿಗೇರ, ಯಲ್ಲಪ್ಪ ಕಮಾಜಿ, ಮುತ್ತು ಸುಂಕದ, ಮುತ್ತಪ್ಪ ಬಳ್ಳಾರಿ, ನಾಗಪ್ಪ ಬಾಳಿಕಾಯಿ, ರಾಜುಗೌಡ ಪಾಟೀಲ, ಮಾಹಾಂತೇಶ ಬಳ್ಳಾರಿ ಇದ್ದರು.