ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗಣೇಶನ ಶಾಪ ತಟ್ಟಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಸಿದ್ದರಾಮಯ್ಯಗೆ ಗಣೇಶನ ಶಾಪ ತಟ್ಟಿದೆ. ಗಣೇಶನ ಬಂಧನ ಮಾಡಿದ್ದೇ ಶಾಪ. ಈ ನಿರ್ಣಯ ಬಿಜೆಪಿಯ ಗೆಲುವು. ಬಿಜೆಪಿ ಈ ಹಗರಣದ ಕುರಿತು ಪಾದಾಯಾತ್ರೆ ಮಾಡಿತ್ತು. ವಿಧಾನಸಭೆಯ ಒಳಗೂ ಹೊರಗೂ ಪ್ರತಿಭಟನೆ ಮಾಡಿತ್ತು. ರಾಮಕೃಷ್ಣ ಹೆಗಡೆಯವರ ಶಿಷ್ಯ ಆಗಿದ್ದರೆ, ನೈತಿಕತೆ ಇದ್ದರೆ ರಾಜಿನಾಮೆ ಕೊಡಲಿ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರಿಗೆ ಕಳೆದ ನಾಲ್ಕೈದು ತಿಂಗಳಿಂದ ಸಿಎಂ ವಿರುದ್ಧದ ದಾಖಲೆಗಳನ್ನು ತೆಗೆಯಲಾಗುತ್ತಿದೆ. ಈ ಬಗ್ಗೆ ಸಿಎಂಗೆ ಗೊತ್ತೇ ಇಲ್ಲವಾ? ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ತಿಳಿದುಕೊಂಡು ಸಂಗೊಳ್ಳಿ ರಾಯಣ್ಣನ ತರಹವೇ ನನ್ನ ಬೆನ್ನಿಗೂ ಚೂರಿ ಹಾಕುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣನಂತೆ ನನಗೂ ಹಿತ ಶತ್ರುಗಳ ಕಾಟವಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದು, ಎಚ್ಚೆತ್ತುಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತಿಳಿಸಿದರು.