ಮುಖ್ಯಮಂತ್ರಿ ಸಿದ್ದರಾಮಯ್ಯರ ಹೊಸ ಮನೆಗೆ ಸಿಗ್ತಿಲ್ಲ ವಿದ್ಯುತ್ ಸಂಪರ್ಕ: ಸಿಎಂಗೆ ಹೀಗಾದ್ರೆ ಹೇಗೆ?

0
Spread the love

ಮೈಸೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ಮನೆ ಸಿದ್ಧಗೊಂಡು ಗೃಹ ಪ್ರವೇಶಕ್ಕೆ ರೆಡಿಯಾಗಿದೆ. ಆದ್ರೆ ಈ ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎನ್ನಲಾಗಿದೆ.

Advertisement

ಮೈಸೂರಿನ‌ ಕುವೆಂಪು ನಗರದಲ್ಲಿ 80 & 120 ಅಳತೆಯಲ್ಲಿ ಮನೆಯನ್ನು ಸಿಎಂ ಕಟ್ಟಿಸಿದ್ದಾರೆ. ಮನೆಯ ಕೆಲಸ ಮುಗಿದಿದೆ. ಆದರೆ, ಹೊಸ ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ಮಾತ್ರ ಸಿಗುತ್ತಿಲ್ಲ. ವಿದ್ಯುತ್ ಸಂಪರ್ಕ ಸಿಗದೆ ಗೃಹಪ್ರವೇಶ ಮಾಡಲು ಆಗಲ್ಲ. ಗೃಹ ಪ್ರವೇಶ ಮಾಡಿದರೂ ಮನೆಯಲ್ಲಿ ವಾಸಿಸಲು ಆಗಲ್ಲ.

ಹೀಗಾಗಿ, ಸಿಎಂಗೆ ಸಮಸ್ಯೆ ಎದುರಾಗಿದೆ. ಹೊಸ ಮನೆ ವಿದ್ಯುತ್ ಸಂಪರ್ಕಕ್ಕೆ ಈಗ ಓಸಿ ಅಂದರೆ ಸ್ವಾಧೀನಾನುಭವ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ. ಈ ಪತ್ರವನ್ನು ಸಿಎಂ ಸಲ್ಲಿಸದ ಕಾರಣ ವಿದ್ಯುತ್ ನಿಗಮವು ಸಿಎಂ ಕುಟುಂಬದ ಅರ್ಜಿಯನ್ನು ಪುರಸ್ಕರಿಸಿಲ್ಲ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here