ಚಿಕ್ಕಬಳ್ಳಾಪುರ: ಶನಿವಾರ ಚಿನ್ನೇಪಳ್ಳಿ ಕ್ರಾಸ್ನ ಆರ್ಎಸ್ ಕಲ್ಯಾಣ ಮಂಟಪದ ರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಹಿಂಬದಿಯಲ್ಲಿ ಕುಳಿತ ನವವಿವಾಹಿತೆ ವರ್ಷಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸವಾರ ಸುರೇಂದ್ರ ಗಂಭೀರ ಗಾಯಗೊಂಡಿದ್ದಾರೆ.
ಮೃತ ವರ್ಷಿಣಿ ಬಾಗೇಪಳ್ಳಿ ತಾಲ್ಲೂಕಿನ ಚೆಂಚುರಾಯನಪಳ್ಳಿ ಗ್ರಾಮದವರು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಅವರು ಸುರೇಂದ್ರ ಅವರೊಂದಿಗೆ ಮದುವೆಯಾಗಿದ್ದರು. ಅಪಘಾತದಲ್ಲಿ ಗಾಯಗೊಂಡ ಸುರೇಂದ್ರರನ್ನು ತಕ್ಷಣವೇ ಬಾಗೇಪಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಬಾಗೇಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.



