ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
ಮೃತರನ್ನು ವಿಷ್ಣು (14), ನಿಹಾಲ್ ರಾಜ್ (12) ಮತ್ತು ಹರ್ಷವರ್ಧನ್ (16) ಎಂದು ಗುರುತಿಸಲಾಗಿದೆ. ಇವರು ಅಚೇಪಲ್ಲಿ ಗ್ರಾಮದವರು ಎನ್ನಲಾಗಿದೆ.
ದಸರಾ ರಜೆ ಹಿನ್ನೆಲೆ ಶಾಲೆಗಳಿಗೆ ರಜೆ ಇದ್ದುದ್ದರಿಂದ ಬಾಲಕರು ಕೆರೆಯಲ್ಲಿ ಈಜಾಡಲು ತೆರಳಿದ್ದರು. ಮೊದಲಿಗೆ ವಿಷ್ಣು ಹಾಗೂ ನಿಹಾಲ್ ರಾಜ್ ಈಜಾಡಲು ತೆರಳಿದ್ದು, ಅವರು ನೀರಿನಲ್ಲಿ ಮುಳುಗುತ್ತಿದ್ದುದ್ದನ್ನು ಕಂಡ ಹರ್ಷವರ್ಧನ್ ರಕ್ಷಣೆಗೆ ಮುಂದಾಗಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮೂವರ ಮೃತದೇಹಗಳನ್ನ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.