ಚಿಕ್ಕಮಗಳೂರು:-ಚಿಕ್ಕಮಗಳೂರು ಜಿಲ್ಲಾಡಳಿತದ ಮಹಾ ಎಡವಟ್ಟಿನಿಂದ ಕುಟುಂಬವೊಂದು ಬೀದಿಗೆ ಬಿದ್ದಿದೆ.
ಎಸ್, ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬ ಒಂದು, ಪರಿಹಾರದ ಹಣಕ್ಕಾಗಿ ನಿತ್ಯ ಪರದಾಟ ನಡೆಸಿದ್ದು, ಇದೀಗ ಆ ಚೆಕ್ ಕೂಡ ಬೌನ್ಸ್ ಆಗಿದೆ. ಈ ಮೂಲಕ ಜಿಲ್ಲಾಡಳಿತದ ಮಹಾ ಎಡವಟ್ಟು ಬಟಾ ಬಯಲಾಗಿದೆ.
ಹೀಗಾಗಿ ಜಿಲ್ಲೆಯ ಕಳಸ ತಾಲೂಕು ಕಚೇರಿಯಲ್ಲಿ ಪರಿಹಾರದ ಹಣ ನೀಡುವಂತೆ ಮನೆ ಕಳೆದುಕೊಂಡ ವ್ಯಕ್ತಿ ಲಕ್ಷ್ಮಣ್ ರಂಪಾಟ ಮಾಡಿದ್ದಾರೆ. ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ನಿವಾಸಿಯಾಗಿರುವ ಲಕ್ಷ್ಮಣ್, ಕಳೆದ ಮಳೆಗಾಲದಲ್ಲಿ ಅವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಸಂಪೂರ್ಣ ಹಾನಿಯಾಗಿದೆ.
ಮನೆ ಹಾನಿಯಾದ ಹಿನ್ನೆಲೆ ಜಿಲ್ಲಾಡಳಿತದಿಂದ 1 ಲಕ್ಷದ 20 ಸಾವಿರ ರೂ. ಪರಿಹಾರ ನೀಡಲಾಗಿದೆ. ಆದರೆ ಜಿಲ್ಲಾಡಳಿತ ನೀಡಿದ ಚೆಕ್ ಬೌನ್ಸ್ ಆಗಿದೆ. ಮೂರು ತಿಂಗಳಿನಿಂದ ಕಳಸ ತಾಲೂಕು ಕಚೇರಿಗೆ ಲಕ್ಷ್ಮಣ್ ಅಲೆದರು ಕೂಡ ಪರಿಹಾರದ ಹಣ ಸಿಕ್ಕಿಲ್ಲ.
ಹೀಗಾಗಿ ಕಳಸ ತಹಶಿಲ್ದಾರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಣ ಬಿಡುಗಡೆ ಮಾಡಿ ಎಂದು ತಹಶಿಲ್ದಾರ್ಗೆ ಲಕ್ಷ್ಮಣ್ ಕ್ಲಾಸ್ ತೆಗೆದುಕೊಂಡಿದ್ದು, ಪರಿಹಾರದ ಹಣವನ್ನು ಡಿಸಿ ಬಳಿ ಕೇಳುವಂತೆ ತಹಶಿಲ್ದಾರ್ ಉಡಾಫೆ ಉತ್ತರ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಇತ್ತ ಬೀದಿಗೆ ಬಿದ್ದಿರುವ ಕುಟುಂಬ ದಿಕ್ಕೇ ತೋಚದಂತೆ ಕಂಗಾಲಾಗಿದೆ.