ಚಿಕ್ಕಮಗಳೂರು:- ಜಿಲ್ಲೆಯ ಹೊಸಳ್ಳಿ ಗ್ರಾಮದಲ್ಲಿ ಮನುಷ್ಯತ್ವ ಕಳೆದುಕೊಂಡ ಪತಿ ಪತ್ನಿಯನ್ನು ಚಾಕು ಇರಿದು ಕೊಂದ ಘಟನೆ ನಡೆದಿದೆ.
Advertisement
ಹತ್ಯೆಯಾದ ಮಹಿಳೆ ನೇತ್ರಾ (32), ಪತಿ ನವೀನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಐದು ತಿಂಗಳ ಹಿಂದೆ ಮದುವೆಯಾದ ಈ ದಂಪತಿಯ ನಡುವೆ ಪದೇಪದೇ ಜಗಳವಿದ್ದು, ಮೂರು ತಿಂಗಳ ಹಿಂದೆ ನೇತ್ರಾ ತವರು ಸೇರಿದ್ದರು.
ತವರು ಮನೆಗೆ ಬಂದು ನವೀನ್ ಚಾಕು ಇರಿದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ನೇತ್ರಾ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.