ಚಿಕ್ಕಮಗಳೂರು: ಎಂಟು ವರ್ಷವಾದರೂ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಐವರು ನಕ್ಸಲರರಿಂದ ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಗೆ ಮನವಿ ಮಾಡಿದ್ದಾರೆ. ಮಾಜಿ ನಕ್ಸಲರಾದ ಸಿರಿಮನೆ ನಾಗರಾಜ್, ನಿಲಗುಳಿ ಪದ್ಮನಾಭ್, ನೂರ್ ಶ್ರೀಧರ್, ಶಿವು, ಪರಶುರಾಮ ಚಿಕ್ಕಮಗಳೂರು ಡಿಸಿ ಕಛೇರಿಗೆ ಆಗಮಿಸಿ ಗೌರಿ ಲಂಕೇಶ್ ಹತ್ಯೆ ಬಳಿಕ ರಾಜ್ಯ ಸಮಿತಿ ಕೂಡ ನಿಷ್ಕ್ರಿಯಗೊಂಡಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ನಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಮನವಿ ಮಾಡಿದ್ದಾರೆ.
ಇನ್ನೂ 2016 ರಲ್ಲಿ 4 ಜನ, 2017 ರಲ್ಲಿ 3 ಜನ ನಕ್ಸಲರು ಶರಣಾಗಿದ್ದರು. ಕನ್ಯಾಕುಮಾರಿಯ ಕೇಸ್ ಇನ್ನೂ ಇತ್ಯರ್ಥವಾಗಿಲ್ಲ, ಜೈಲಿನಲ್ಲಿದ್ದಾರೆ. ಕನ್ಯಾಕುಮಾರಿ ಮಗು ಪೋಷಕರ ಪ್ರೀತಿ ಇಲ್ಲದೆ ಬೆಳೆಯುತ್ತಿದೆ. ಮಾಸಾಶನ, ಭೂಮಿ, ಮನೆ ನೀಡುವಂತೆ ಜೊತೆಗೆ ಇರುವ ಕೇಸ್ ಗಳನ್ನ ಕೂಡಲೇ ಇತ್ಯರ್ಥಗೊಳಿಸುವಂತೆ ಮನವಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಗೆ ಮನವಿ ಮಾಡಿದ್ದಾರೆ.