ಮಂಡ್ಯ: ದೇಗುಲದ ಗೇಟ್ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಗ್ರಾಮದ ಚನ್ನಕೇಶವ ದೇಗುಲದಲ್ಲಿ ನಡೆದಿದೆ. ಹೆಚ್.ಎಸ್.ಜಿಷ್ಣು (5) ಮೃತ ಮಗುವಾಗಿದ್ದು, ನಿನ್ನೆ ಕಾರ್ತಿಕ ಮಾಸದ ಸೋಮವಾರ ಹಿನ್ನೆಲೆ ಕುಟುಂಬದೊಂದಿಗೆ ಗ್ರಾಮದ ಚನ್ನಕೇಶವ ದೇಗುಲಕ್ಕೆ ಮಗು ತೆರಳಿತ್ತು.
ಈ ವೇಳೆ ದೇಗುಲದ ಗೇಟ್ ಜಿಷ್ಣು ಮೇಲೆ ಬಿದ್ದು ತೀವ್ರ ಗಾಯವಾಗಿದ್ದು, ತಕ್ಷಣ ಪೋಷಕರು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು,
ಮುಜರಾಯಿ ಇಲಾಖೆಗೆ ಸೇರಿದ್ದ ಚನ್ನಕೇಶವ ದೇಗುಲವಾಗಿದ್ದು, ಗೇಟ್ ಮುರಿದು ಬಹಳ ದಿನಗಳಾದ್ರೂ ದುರಸ್ಥಿ ಮಾಡದೆ ನಿರ್ಲಕ್ಷ್ಯ ಆರೋಪ ಮಾಡಲಾಗಿದ್ದು, ಮುಜರಾಯಿ ಇಲಾಖೆ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಮುಜರಾಯಿ ಇಲಾಖೆ ವಿರುದ್ಧ ಪೋಷಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಪಿಸಿದ್ದಾರೆ.