ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಅವಶ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ ಎಂದು ಜ್ಯೋತಿ ನೀಲಗುಂದ ಹೇಳಿದರು.

Advertisement

ಅವರು ಪಟ್ಟಣದ ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ಗದಗ ಐಕಾನ್ ಸಂಸ್ಥೆ ವತಿಯಿಂದ ಬೇಸಿಗೆ ಶಿಬಿರದಲ್ಲಿ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಗದಗ ಜಿಲ್ಲಾ ಬಾಲಭವನ ಇವುಗಳ ಸಂಯುಕ್ತ ಆಶ್ರಯದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತ ಮಕ್ಕಳಿಗೆ ಪ್ರಶಸ್ತಿ ನೀಡಿ ಮಾತನಾಡಿದರು.

ಮಕ್ಕಳಲ್ಲಿ ಸದೃಢ ದೇಹದಂತೆಯೇ ಸದೃಢ ಮನಸ್ಸು ಕೂಡ ಅಷ್ಟೇ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಸಾಹಿತ್ಯ, ನಾಟಕ ಇತ್ಯಾದಿಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಭವಿಷ್ಯದ ಉತ್ತಮ ಪ್ರಜೆಗಳಾಗಲು ಉತ್ತಮ ಸಂಸ್ಕಾರ, ಉತ್ತಮ ನಡುವಳಿಕೆ, ಗುಣಮಟ್ಟದ ಶಿಕ್ಷಣ ಪಡೆಯಲು ನಿತ್ಯ ಕ್ರಿಯಾಶೀಲರಾಗಿರಬೇಕು ಎಂದರು.

ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಬದ್ರುನಿಸಾ ಯಳವತ್ತಿ, ಪರಶುರಾಮ ಟೋಪಣ್ಣವರ, ಮುಸ್ಕಾನ ಕುರ್ತಕೋಟಿ, ಧೃವ ಬಟ್ಟೂರ, ಶ್ರೇಯಸ್ ಬ್ಯಾಳಿ, ಸಮೃದ್ಧಿ ಬ್ಯಾಳಿ ವಿಜೇತರಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಐಕಾನ್ ಸಂಸ್ಥೆಯ ನಾಗರಾಜ ಬಂಡಿ ವಹಿಸಿದ್ದರು. ಗದಗ ಜಿಲ್ಲಾ ಬಾಲಭವನ ಸಂಯೋಜಕ ರವಿ ಉಮಚಗಿ, ಉಮಾ ಬ್ಯಾಳಿ, ಶಿವಲಿಂಗಪ್ಪ ಕೊಂಡಿಕೊಪ್ಪ, ಪೂಜಾ ಮ್ಯಾಗೇರಿ, ರೇಷ್ಮಾ ಪರ್ವತಗೌಡರ, ದಾವಲಸಾಬ ಲಾಡಸಾಬನವರ, ಶಿವಲೀಲಾ ಕೋರಿ, ರುಬೀಯಾ ನಮಾಜಿ, ಲಕ್ಷ್ಮೀ ಕೆಲಗಾರ, ನಿಶಾತ್ ಲಾಡಸಾಬನವರ, ಆಶೀಫ್ ನದಾಫ್ ಇದ್ದರು.


Spread the love

LEAVE A REPLY

Please enter your comment!
Please enter your name here