ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಕಳ್ಳಿಯರು! ನರ್ಸ್‌ ವೇಷದಲ್ಲಿ ಬಂದು ಕೃತ್ಯ!

0
Spread the love

ಕಲಬುರ್ಗಿ:- ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಕಳ್ಳಿಯರು ಕಾಟ ಹೆಚ್ಚಾಗಿದ್ದು, ನರ್ಸ್‌ ವೇಷದಲ್ಲಿ ಬಂದು ಹಸುಗೂಸು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisement

ಜಿಲ್ಲಾಸ್ಪತ್ರೆ ವಾರ್ಡ್ ನಂಬರ್ 115 ರಲ್ಲಿ ಕಸ್ತೂರಿ ಎಂಬವರಿಗೆ ಹೆರಿಗೆಯಾಗಿತ್ತು. ನಿನ್ನೆ ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ನರ್ಸ್ ವೇಶದಲ್ಲಿ ಬಂದು ಇಬ್ಬರು ಮಹಿಳೆಯರು ಮಗು ಕಿಡ್ನ್ಯಾಪ್‌ ಮಾಡಿದ್ದಾರೆ.

ರಕ್ತ ತಪಾಸಣೆಗಾಗಿ ಮಗುವನ್ನ ಕರೆದುಕೊಂಡು ಬನ್ನಿ ಅಂತಾ ನಕಲಿ ನರ್ಸ್‌ಗಳು ಹೇಳಿದ್ದರು. ನರ್ಸ್‌ಗಳು ಸಂಪೂರ್ಣವಾಗಿ ಮುಖ ಮುಚ್ಚಿಕೊಂಡು ಬಂದಿದ್ದರು. ಅದರಂತೆ ಮಗುವಿನ ಚಿಕ್ಕಮ್ಮ ಚಂದ್ರಕಲಾ ಮಗುವನ್ನ ರಕ್ತ ತಪಾಸಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗುವನ್ನ ನಮಗೆ ಕೊಡಿ ಅಂತಾ ಹೇಳಿದರು. ಬಳಿಕ ಮಗುವನ್ನ ಎತ್ತಿಕೊಂಡು ಎಸ್ಕೇಪ್‌ ಆಗಿದ್ದಾರೆ.

ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here