ನವದೆಹಲಿ:- ಭಾರತಕ್ಕಿಂತ ಚೀನಾ ರಷ್ಯಾದ ಅತಿ ದೊಡ್ಡ ತೈಲ ಖರೀದಿದಾರ ದೇಶ ಎಂದು ಅಮೆರಿಕಕ್ಕೆ ಸಚಿವ ಜೈಶಂಕರ್ ಸಂದೇಶ ರವಾನಿಸಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾರತದ ರಷ್ಯಾದ ಇಂಧನ ವ್ಯಾಪಾರದ ಬಗ್ಗೆ ಪಾಶ್ಚಿಮಾತ್ಯ ದೇಶಗಳ ಟೀಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದು, ಚೀನಾ ಮತ್ತು ಯುರೋಪಿಯನ್ ಒಕ್ಕೂಟವು ಭಾರತಕ್ಕಿಂತ ಹೆಚ್ಚು ರಷ್ಯಾದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಒತ್ತಿ ಹೇಳಿದ್ದಾರೆ.
2022ರ ನಂತರ ಮಾಸ್ಕೋದೊಂದಿಗಿನ ಒಟ್ಟಾರೆ ವ್ಯಾಪಾರದಲ್ಲಿನ ಏರಿಕೆಗೆ ಭಾರತ ಕಾರಣವಾಗಿರಲಿಲ್ಲ. 2022ರ ನಂತರ ರಷ್ಯಾದೊಂದಿಗೆ ಅತಿ ಹೆಚ್ಚು ವ್ಯಾಪಾರ ನಡೆಸುತ್ತಿರುವ ದೇಶ ನಮ್ಮದಲ್ಲ; ಅದರಲ್ಲಿ ದಕ್ಷಿಣದ ಕೆಲವು ದೇಶಗಳಿವೆ ಎಂದು ನಾನು ಭಾವಿಸುತ್ತೇನೆ” ಎಂದು ಜೈಶಂಕರ್ ಹೇಳದ್ದು, ಅವುಗಳನ್ನು ಹೆಸರಿಸಿಲ್ಲ. “ನಿಮಗೆ ಗೊತ್ತಿರಲಿ ಎಂಬ ಕಾರಣಕ್ಕೆ ಹೇಳುತ್ತೇನೆ, ನಾವು ಯುಎಸ್ ನಿಂದ ಕೂಡ ತೈಲವನ್ನು ಖರೀದಿಸುತ್ತೇವೆ” ಎಂದು ಜೈಶಂಕರ್ ಹೇಳಿದ್ದಾರೆ.