ಹ್ಯಾಟ್ರಿಕ್ ಗೆಲುವಿನ ಖುಷಿಯಲ್ಲಿರೋ RCBಗೆ ‘ತವರೇ’ ಚಾಲೆಂಜ್: ಚಿನ್ನಸ್ವಾಮಿಯಲ್ಲಿ ಬಿಗೆಸ್ಟ್ ಟಾಸ್ಕ್!

0
Spread the love

IPL 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠವಾಗಿ ಕಾಣುತ್ತಿದ್ದು, ಆಡಿದ ಎರಡು ಪಂದ್ಯದಲ್ಲೂ ಭರ್ಜರಿ ಗೆಲುವು ಕಂಡಿದೆ.

Advertisement

ಮೊದಲಿಗೆ ಕೋಲ್ಕತ್ತಾ, ಬಳಿಕ ಚೆನ್ನೈ ಮಣಿಸಿರುವ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಏಪ್ರಿಲ್ 2 ಬುಧವಾರದಂದು ರಾತ್ರಿ 7.30 ಕ್ಕೆ ಶುರುವಾಗಲಿದೆ.

ಇನ್ನೂ ಹೋಮ್​ಗ್ರೌಂಡ್​ ಅನ್ನೋದು ಪ್ರತಿ ತಂಡಕ್ಕೂ ಅಡ್ವಾಂಟೇಜ್ ಆಗಿರುತ್ತೆ. ಯಾವಾಗ್ಲೂ ತವರಿನ ತಂಡವೇ ಗೆಲ್ಲೋ ಫೇವರಿಟ್ ಅನಿಸಿರುತ್ತೆ. ಆರ್​ಸಿಬಿ ವಿಚಾರದಲ್ಲಿ ಇದು ಉಲ್ಟಾ.. ಹೋಮ್​​ಗ್ರೌಂಡ್​ನಲ್ಲಿ ಆರ್​ಸಿಬಿ, ಹೆಚ್ಚು ಪಂದ್ಯಗಳನ್ನು ಸೋತಿದೆ.

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ, ಇದುವರೆಗೆ 91 ಪಂದ್ಯಗಳನ್ನಾಡಿದೆ. ಈ ಪೈಕಿ 43 ಪಂದ್ಯಗಳಲ್ಲಿ ಗೆದ್ದಿರುವ ಆರ್​ಸಿಬಿ, 48.96ರ ವಿನ್ನಿಂಗ್ ಪರ್ಸೇಂಟೇಜ್ ಹೊಂದಿದೆ. ಹೋಮ್​​ಗ್ರೌಂಡ್​ ಚಿನ್ನಸ್ವಾಮಿಯಲ್ಲಿ 7 ಪಂದ್ಯಗಳನ್ನಾಡಲಿರುವ ಆರ್​ಸಿಬಿ, ಕನಿಷ್ಟ ಅಂದ್ರೂ 5 ಪಂದ್ಯಗಳನ್ನ ಗೆಲ್ಲಲೇಬೇಕಿದೆ. ಗೆದ್ರೆ ಪ್ಲೇ ಆಫ್​ ಎಂಟ್ರಿ ಸುಲಭವಾಗಲಿದೆ. ಚಿನ್ನಸ್ವಾಮಿಯ ಈ ಹಿಂದಿನ ದಾಖಲೆಗಳು ಆರ್​​ಸಿಬಿಗೆ ವಿರುದ್ಧವಾಗಿವೆ. ಹಳೆಯ ದಾಖಲೆಯನ್ನ ಸುಳ್ಳಾಗಿಸಿ ತಂಡವನ್ನ ಗೆಲುವಿನ ದಡ ಸೇರಿಸೋ ಜವಾಬ್ದಾರಿ ಇದೀಗ ಕ್ಯಾಪ್ಟನ್​ ರಜತ್​ ಪಟಿದಾರ್​ ಮುಂದಿದೆ.

ಚಿನ್ನಸ್ವಾಮಿ ವಿರಾಟ್​ ಕೊಹ್ಲಿಯ ಫೇವರಿಟ್ ಗ್ರೌಂಡ್. ಈ ಅಂಗಳದಲ್ಲಿ ಕಿಂಗ್ ಕೊಹ್ಲಿ ರನ್ ಸುನಾಮಿಯನ್ನೇ ಸೃಷ್ಟಿಸಿದ್ದಾರೆ. ಈ ಸೀಸನ್​ನಲ್ಲೂ ತನ್ನ ಫೇವರಿಟ್​ ಗ್ರೌಂಡ್​ನಲ್ಲಿ ವಿರಾಟ್ ವೀರಾವೇಶ ಮುಂದುವರಿಸಬೇಕಿದೆ. ತವರಿನ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯಿಟ್ಟಿದ್ದಾರೆ. ಆ ನಿರೀಕ್ಷೆಯನ್ನ ನಿಜವಾಗಿಸಬೇಕಿದೆ.

ಒಟ್ಟಾರೆ ಅಂತಿಮ ರಿಸಲ್ಟ್ ಬುಧವಾರ ರಾತ್ರಿ 11pm ಒಳಗಾಗಿ ಗೊತ್ತಾಗಲಿದೆ. RCB ಅಬಿಮಾನಿಗಳು ಈ ಪಂದ್ಯಕ್ಕಾಗಿ ಕಾತುರರಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here