ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 13ರ ವಿದ್ಯಾರ್ಥಿಗಳು ಮೊರಾರ್ಜಿ ವಸತಿ ಶಾಲೆಗೆ, ಚಂದನ ಶಾಲೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ವಿಶ್ವನಾಥ ಹು.ಒಂಟೆತ್ತಿನ, ವಿರೂಪಾಕ್ಷ ಎಣ್ಣಿ, ದೀಪಾ ಮಾ.ಎಣ್ಣಿ, ಉಮೇಶ ದೇ.ಕಿನ್ನರಿ, ಓಂಕಾರ ಮಾ.ತಳವಾರ ಈ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳನ್ನು ವಾರ್ಡ ನಂ. ೨೭ರ ನಗರಸಭಾ ಸದಸ್ಯರಾದ ಲಲಿತಾ ಬ.ಅಸೂಟಿ, ಶಾಲೆಯ ಪ್ರಧಾನ ಗುರುಮಾತೆಯರಾದ ಎಸ್.ಎಸ್. ಹುರಕಡ್ಲಿ, ಸಹ ಶಿಕ್ಷಕಿ ಎಸ್.ಬಿ. ಬೇವಿನಮಟ್ಟಿ, ಮಾರ್ಗದರ್ಶಕರಾದ ರವಿಕುಮಾರ ಹೂಗಾರ ಗುರುಗಳು, ಶಾಲೆಯ ಎಲ್ಲ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.



