ಬೆಂಗಳೂರು:- ಸಿನಿಮೀಯ ರೀತಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಪವಾಡದ ರೀತಿ ಬೈಕ್ ಸವಾರ ಪಾರಾಗಿರುವ ಘಟನೆ ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯ ಕನ್ನಮಂಗಲ ಗೇಟ್ ಬಳಿ ಜರುಗಿದೆ. ಚಾಲಕನ ಅತೀ ವೇಗದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ.
ಕನ್ನಮಂಗಲ ಗೇಟ್ ಮೂಲಕ ವೈಟ್ ಪೀಲ್ಡ್ ಕಡೆ ವೇಗವಾಗಿ ಬರುತ್ತಿದ್ದ ಸ್ಕೂಲ್ ವ್ಯಾನ್, ಚಾಲಕನ ನಿಯಂತ್ರಣ ತಪ್ಪಿ ಸಿಗ್ನಲ್ ಬಳಿ ನಿಂತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಮುಂದೆ ಬರ್ತಿದ್ದ ಕಾರಿಗೂ ಡಿಕ್ಕಿ ಹೊಡೆದು ಸ್ಕೂಲ್ ವ್ಯಾನ್ ನಿಂತಿದೆ. ಘಟನೆಯಿಂದ ಸಣ್ಣ ಪುಟ್ಟ ಗಾಯಗಳಿಂದ ಸವಾರ ಬಚಾವ್ ಆಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಅಪಘಾತದ ಭೀಕರ ದೃಶ್ಯ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಘಟನೆ ಸಂಬಂಧ ಮಹಾದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



