HomeEntertainmentಕನ್ನಡದ ಆದಿಕವಿಗೆ ಸಿನಿಮಾ ಗೌರವ: ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮಹಾಕವಿ’ ಚಿತ್ರೀಕರಣ ಪೂರ್ಣ

ಕನ್ನಡದ ಆದಿಕವಿಗೆ ಸಿನಿಮಾ ಗೌರವ: ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮಹಾಕವಿ’ ಚಿತ್ರೀಕರಣ ಪೂರ್ಣ

For Dai;y Updates Join Our whatsapp Group

Spread the love

ಬೆಳಗಾವಿಯ ಪ್ರಭು ಯತ್ನಟ್ಟಿ ಅವರ ಪಿ.ಆರ್. ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಾణವಾಗುತ್ತಿರುವ, ಗಣ್ಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಇಪ್ಪತ್ತೈದನೇ ಚಿತ್ರ ‘ಮಹಾಕವಿ’ಯ ಚಿತ್ರೀಕರಣ ಭವ್ಯವಾಗಿ ಮುಕ್ತಾಯಗೊಂಡಿದೆ. ಈಗ ಚಿತ್ರ ನಿರ್ಮಾಣದ ಅಂತಿಮ ಹಂತವಾದ ಚಿತ್ರೀಕರಣೋತ್ತರ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಕನ್ನಡದ ಆದಿಕವಿ ಪಂಪನ ಕಾವ್ಯಪರಿಕಲ್ಪನೆಗಳನ್ನು ಜೀವಂತಗೊಳಿಸುವ ಕಲೆ ಈ ಚಿತ್ರದ್ದಾಗಿದ್ದು, ಪಂಪನ ಜೀವನಚರಿತ್ರೆಯನ್ನು ಹೇಳುವುದಲ್ಲ, ಅವರ ಕಾವ್ಯಗಳಲ್ಲಿ ಪ್ರತಿಫಲಿಸುವ ಮಾನವೀಯತೆ, ಸಾಮಾಜಿಕ ಸಂದೇಶ ಮತ್ತು ಸೃಜನಶೀಲ ಸ್ವಾತಂತ್ರ್ಯದ ಆತ್ಮವನ್ನು ದೃಶ್ಯಮಾಧ್ಯಮಕ್ಕೆ ತರಲು ಈ ಸಿನಿಮಾ ಪ್ರಯತ್ನಿಸಿದೆ.

ರಾಜನ ಆಸ್ಥಾನದಲ್ಲಿದ್ದಾಗಲೂ ಸೃಜನಶೀಲ ಸ್ವಾತಂತ್ರ್ಯವನ್ನು ಉಳಿಸಿಕೊಂಡ ಪಂಪನ ಮನೋಭಾವ ಇಂದಿಗೂ ಸಮಾನವಾಗಿ ಪ್ರಸ್ತುತವಾಗಿರುವುದು ‘ಮಹಾಕವಿ’ಯ ಮೌಲಿಕ ಅಂಶ. ಜಾತಿ ವ್ಯವಸ್ಥೆಯ ವಿರುದ್ಧ ಮೊಟ್ಟಮೊದಲ ಕವಿ ಧ್ವನಿಯಾಗಿರುವ ಪಂಪನು ‘ಆದಿಪುರಾಣ’ದಲ್ಲಿ “ಮನುಷ್ಯ ಜಾತಿ ತಾನೊಂದೆ ವಲಂ” ಎಂದು ಮಾನವ ಸಮಾನತೆಯ ಪರ ಘೋಷಿಸಿದರೆ, ‘ವಿಕ್ರಮಾರ್ಜುನ ವಿಜಯ’ದಲ್ಲಿ ಕರ್ಣನ ಪಾತ್ರದ ಮೂಲಕ ಜಾತಿಯ ಹೆಸರಿನಲ್ಲಿ ಮನುಷ್ಯನ ಮೌಲ್ಯವನ್ನು ಅಳೆಯುವ ವ್ಯವಸ್ಥೆಯ ವಿರುದ್ಧ ಬಲವಾದ ನಿಲುವು ತಾಳಿದ್ದಾನೆ. ಯುದ್ಧದ ಬದಲು ಶಾಂತಿಯ ಸಂದೇಶ, ಅಧಿಕಾರದ ಅಹಂಕಾರಕ್ಕೆ ವಿರೋಧ, ಭೋಗದ ನಶ್ವರತೆ—ಈ ಎಲ್ಲ ಪರಿಕಲ್ಪನೆಗಳು ‘ಮಹಾಕವಿ’ ಸಿನಿಮಾದ ಹೃದಯವಾಗಿವೆ.

ಚಿತ್ರದಲ್ಲಿ ಪಂಪನ ಕೆಲವು ಪದ್ಯಗಳನ್ನು ಬಳಸಲಾಗಿದ್ದು, ಒಂದು ಗೀತೆಯನ್ನು ಸ್ವತಃ ಬರಗೂರು ರಾಮಚಂದ್ರಪ್ಪ ಅವರು ಬರೆಯಲಾಗಿದೆ. ಕಥೆ, ಸಂಭಾಷಣೆ ಮತ್ತು ನಿರ್ದೇಶನ—ಈ ಮೂರು ಹಂತಗಳನ್ನೂ ಅವರು ಸ್ವತಃ ನಿಭಾಯಿಸಿದ್ದಾರೆ. ಪಂಪನ ಪಾತ್ರದಲ್ಲಿ ಗಂಭೀರ ಅಭಿನಯದ ಮೂಲಕ ಮೆಚ್ಚುಗೆ ಪಡೆದ ನಟ ಕಿಶೋರ್ ಜೀವ ತುಂಬಿದ್ದರೆ, ‘ಬಿಗ್ ಬಾಸ್’ ಖ್ಯಾತಿಯ ಅನುಷಾ ರೈ ನಾಯಕಿಯಾಗಿ ಮಿನುಗಿದ್ದಾರೆ. ಬಾಲ ಪಂಪನ ಪಾತ್ರವನ್ನು ಆಕಾಂಕ್ಷ್ ಬರಗೂರು ಹೊತ್ತುಕೊಂಡಿದ್ದು, ಹಿರಿಯ ನಟರಾದ ಸುಂದರರಾಜ್, ಪ್ರಮೀಳಾ ಜೋಷಾಯ್, ಕುಮಾರ್ ಗೋವಿಂದ್ ಸೇರಿದಂತೆ ಅನೇಕ ಕಲಾವಿದರು ಸಿನಿಮಾಗೆ ಬಲ ತುಂಬಿದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ, ತ್ರಿಭುವನ್ ನೃತ್ಯ ನಿರ್ದೇಶನ ಮತ್ತು ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಎಲ್ಲವೂ ಸೇರಿ ‘ಮಹಾಕವಿ’ ಅನ್ನು ಮಟ್ಟದ ಸಿನಿಮಾವಾಗಿಸುವ ಭರವಸೆ ನೀಡುತ್ತದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!