ಬೆಂಗಳೂರಿನ ನಾಗರಿಕರೇ ಗಮನಿಸಿ: ಇಂದು ಹಲವೆಡೆ ವಿದ್ಯುತ್ ವ್ಯತ್ಯಯ!

0
Spread the love

ಬೆಂಗಳೂರು:-ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ.

Advertisement

ಕಳೆದೊಂದು ವಾರದಿಂದ ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನ ವಿದ್ಯುತ್ ಮೂಲಸೌಕರ್ಯ, ರಿಸೀವಿಂಗ್ ಸ್ಟೇಷನ್‌ಗಳು ಮತ್ತು ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಆವರ್ತಕ ನಿರ್ವಹಣಾ ಕಾರ್ಯ ನಡೆಯುತ್ತಿದೆ. ಹೀಗಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇಂದು ಕೂಡ ನಿರ್ವಹಣಾ ಕಾರ್ಯ ಇರುವ ಹಿನ್ನೆಲೆ ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:
ಹೆಣ್ಣೂರು ಬಂಡೆ, ಸಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ಟ್ ಜಯಂತಿ ಕಾಲೇಜು, ಕೆ.ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್, ಕೆ.ನಾರಾಯಣಪುರ ಕ್ರಾಸ್, ಬಿ.ಡಿ.ಎಸ್. ಗಾರ್ಡನ್, ಕೊತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿ.ಎಸ್.ಐ ಗೇಟ್, ಬೈರತಿ ಕ್ರಾಸ್, ಬೈರತಿ ಹಳ್ಳಿ, ಎವರ್ ಗ್ರೀನ್ ಲೇಔಟ್, ಕನಕ ಶ್ರೀ ಲೇಔಟ್, ಗೆದ್ದಲ ಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್, ಮೈಕಲ್ ಸ್ಕೂಲ್, ಬಿ.ಹೆಚ್.ಕೆ. ಇಂಡಸ್ಟ್ರೀಸ್, ಜಾನಕೀ ರಾಮ್ ಲೇಔಟ್, ವಡ್ಡರ ಪಾಳ್ಯ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜೊತೆಗೆ ಅನುಗ್ರಹ ಲೇಔಟ್, ಕಾವೇರಿ ಲೇಔಟ್, ಆತ್ಮ ವಿದ್ಯಾನಗರ, ಬೈರತಿ ಹಳ್ಳಿ, ಕೆ.ಆರ್.ಸಿ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್‌ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂದ್ರ ಕಾಲೋನಿ ಮಂಜುನಾಥ್ ನಗರ, ಹೊರಮಾವು ಬಿಬಿಎಂಪಿ, ಅಗರ ಗ್ರಾಮ, ಪಟಾಲಮ್ಮ ಟೆಂಪಲ್, ಎ.ಕೆ.ಆರ್ ಸ್ಕೂಲ್, ಹೊಸ ಮಿಲೇನಿಯಮ್ ಸ್ಕೂಲ್, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್, ಕ್ರಿಸ್ಟೇನ್ ಕಾಲೇಜು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.


Spread the love

LEAVE A REPLY

Please enter your comment!
Please enter your name here