ಬೆಂಗಳೂರು:– ಅಂತೂ, ಇಂತೂ ಗೌರಿ ಗಣೇಶ ಹಬ್ಬ ಬಂದೇ ಬಿಡ್ತು. ಇದೇ ಹೊತ್ತಲ್ಲಿ ಸಾಲು ಸಾಲು ರಜೆ ಬೇರೆ ಇರೋದ್ರಿಂದ ಸಿಟಿ ಮಂದಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.
Advertisement
ಈ ಹಿನ್ನೆಲೆಯಲ್ಲಿ ತುಮಕೂರು, ಬಳ್ಳಾರಿ, ಶಿವನಾಂದ ಸರ್ಕಲ್ ಫ್ಲೈ ಓವರ್ ಮತ್ತು ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದಾರೆ. ಸಂಚಾರ ದಟ್ಟಣೆಗೆ ವಾಹನ ಸವಾರರು ಹೈರಾಣಾಗಿದ್ದಾರೆ.
ಅಮಾವಾಸ್ಯೆ, ಗೌರಿ ಗಣೇಶ, ವೀಕೆಂಡ್ ರಜೆ ಸೇರಿ ಸಾಲು ಸಾಲು ರಜೆ ಇರುವ ಕಾರಣದಿಂದ ಸಿಟಿ ಮಂದಿ ಊರುಗಳತ್ತ ತೆರಳಿದ್ದು, ಇದರಿಂದ ಸಿಟಿ ಮಂದಿ ಟ್ರಾಫಿಕ್ ನಲ್ಲಿ ಸಿಲುಕಿ ನರಳಿ ಬೆಂಡಾಗಿದ್ದಾರೆ.