ನೆಲಮಂಗಲ:- ಸಾಲು ಸಾಲು ರಜೆ ಮುಗಿಸಿಕೊಂಡು ಜನರು ಬೆಂಗಳೂರಿನತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ನೆಲಮಂಗಲ–ಕುಣಿಗಲ್ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.
ಮೂರು ದಿನಗಳ ರಜೆ ಕಾರಣದಿಂದ ಊರಿಗೆ ತೆರಳಿದ್ದವರು ಒಂದೇ ವೇಳೆ ವಾಪಸ್ಸಾಗುತ್ತಿರುವುದರಿಂದ ಹಾಸನ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಾಮ್ ಆಗಿದ್ದು, ಸುಮಾರು ನಾಲ್ಕು ಕಿಲೋಮೀಟರ್ ದೂರದವರೆಗೆ ವಾಹನಗಳು ನಿಂತುಹೋಗಿವೆ.
ಇದರಿಂದ ವಾಹನ ಸವಾರರು ತೀವ್ರ ಪರದಾಟ ಅನುಭವಿಸುತ್ತಿದ್ದು, ಟ್ರಾಫಿಕ್ ನಿಯಂತ್ರಣಕ್ಕಾಗಿ ನೆಲಮಂಗಲ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.



