ಹರಾಜಿಗಾಗಿ ದಿವಾಣಿ ನ್ಯಾಯಾಧೀಶರ ಆದೇಶ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಪೇಠಾಲೂರು ಗ್ರಾಮದಲ್ಲಿ ಇರುವ, ಅಧಿಭೋಗದಲ್ಲಿಲ್ಲದ ಭೂಮಿಯ ಅಧಿಭೋಗದ ಹಕ್ಕನ್ನು ಮಾನ್ಯ ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ಪ್ರ.ಸ. ನ್ಯಾಯಿಕ ದಂಡಾಧಿಕಾರಿಗಳು ರೋಣ ಇವರ ಕಿ.ಮಿ. ನಂ:134/2020ರ ಆದೇಶದಂತೆ ಜಮೀನನ್ನು ಮಾಲಿಕರಿಂದ ನ್ಯಾಯಾಲಯಕ್ಕೆ ಸಂದಾಯ ಮಾಡಬೇಕಾದ ಮೊತ್ತ 1,44,000 ರೂ.ಗಳನ್ನು ಭರಣ ಮಾಡಲು ಎಪ್ರಿಲ್ 8ರಂದು ಬೆಳಿಗ್ಗೆ 11 ಗಂಟೆಗೆ ಅಥವಾ ಸಮಯದ ಅನಂತರ ಬಹಿರಂಗ ಹರಾಜಿಗೆ ಇಡಲಾಗುವುದೆಂದು ನೋಟೀಸ್ ನೀಡಲಾಗಿದೆ.

Advertisement

ಮುಂಡರಗಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿ, ಹರಾಜಿನ ದಿನಕ್ಕೆ ಮೊದಲು ಕಚೇರಿಯ ವೇಳೆಯಲ್ಲಿ ಅಥವಾ ಹರಾಜನ್ನು ನಡೆಸುವ ಅಧಿಕಾರಿಗೆ ಅರ್ಜಿ ಸಲ್ಲಿಸಿ, ಹರಾಜಿನ ಕಾಲದಲ್ಲಿ ಸಂಬಂಧಿಸಿದ ಹಿತಾಸಕ್ತಿಗಳು ಸಹಿ ಮಾಡಿದ ಹರಾಜಿನ ಲಿಖಿತ ಅಥವಾ ಮುದ್ರಿತ ಷರತ್ತುಗಳನ್ನು ನೋಡಕೊಳ್ಳಬಹುದು ಮತ್ತು ಸವಾಲು ಮಾಡಬಯಸುವವರು ಸವಾಲು ಮಾಡುವ ಮೊದಲು ಸದರಿ ಷರತ್ತುಗಳನ್ನು ತಿಳಿದುಕೊಂಡಿರಬೇಕೆಂದು ಎಚ್ಚರಿಕೆ ಕೊಡಲಾಗಿದೆ ಎಂದು ಮುಂಡರಗಿ ತಹಸೀಲ್ದಾರರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here