ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೆಲಸ ಮಹತ್ವದ್ದಾಗಿದೆ. ಪೌರ ಕಾರ್ಮಿಕರು ಕಾಯಕ ಯೋಗಿಗಳು ಎಂದು ಪ.ಪಂ ಸದಸ್ಯ ಕೆ.ಎಲ್. ಕರಿಗೌಡರ ಹೇಳಿದರು.
ಅವರು ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ 14ನೇ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಗೌರವಿಸಿ ಮಾತನಾಡಿದರು.
ಮುಳಗುಂದ ಪಟ್ಟಣಕ್ಕೆ ಸತತ ಮೂರು ಬಾರಿ ಪ್ರಶಸ್ತಿ ದೊರೆಯಲು ಪೌರ ಕಾರ್ಮಿಕರ ಶ್ರಮ ಕಾರಣವಾಗಿದೆ. ಇವರು ನಿತ್ಯ ಕಾಯಕ ಯೋಗಿಗಳು. ಅವರುಗಳನ್ನು ಗೌರವದಿಂದ ಕಾಣಬೇಕು, ಕೇವಲ ಪೌರ ಕಾರ್ಮಿಕರು ಮಾತ್ರ ಸ್ವಚ್ಛತೆಗೆ ಪಣತೊಟ್ಟರೆ ಸಾಲದು. ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆ ಬಗ್ಗೆ ಜಾಗೃತಿ ವಹಿಸಿದಲ್ಲಿ ನಮ್ಮೆಲ್ಲರ ಆರೋಗ್ಯ ಕಾಪಾಡುವುದರ ಜತೆಗೆ ಸುಂದರ ಪರಿಸರ ನಿರ್ಮಿಸಲು ಸಾಧ್ಯ ಎಂದರು.
ಎಂ.ಎನ್. ನಡಗೇರಿ ಮಾತನಾಡಿ, ಪೌರ ಕಾರ್ಮಿಕರ ಸೇವೆಯಿಂದ ಇಂದು ನಾವೆಲ್ಲರೂ ಆರೋಗ್ಯದಿಂದ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗಿದೆ. ಪೌರ ಕಾರ್ಮಿಕರಿಗೂ ಸಾಕಷ್ಟು ಸಮಸ್ಯೆಗಳು ಇರುವುದರಿಂದ ಅವುಗಳನ್ನು ನಾವೆಲ್ಲರೂ ಬಗೆಹರಿಸುವ ಮೂಲಕ ನೆಮ್ಮದಿ ಜೀವನ ನಡೆಸುವಂತೆ ಅವರ ಜೊತೆ ನಿಲ್ಲೋಣ ಎಂದರು.
ಅಧ್ಯಕ್ಷತೆಯನ್ನು ಪ.ಪಂ ಅಧ್ಯಕ್ಷೆ ಯಲ್ಲವ್ವ ಕವಲೂರ ವಹಿಸಿದ್ದರು. ಉಪಾಧ್ಯಕ್ಷೆ ಅನಸೂಯಾ ಸೋಮಗೇರಿ, ಪ.ಪಂ ಮುಖ್ಯಾಧಿಕಾರಿ ಕೃಷ್ಣಾ ಹಾದಿಮನಿ, ವಾಣಿಶ್ರೀ ನಿರಂಜನ, ಮಾಹಾದೇವಪ್ಪ ಗಡಾದ, ಮಾಹಾಂತೇಶ ನೀಲಗುಂದ, ನಾಗರಾಜ ದೇಶಪಾಂಡೆ, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ನೀಲಪ್ಪ ದೊಡ್ಡಮನಿ, ಉಪಾಧ್ಯಕ್ಷ ಮಾಹಾಂತಪ್ಪ ದಿವಟರ, ಪ.ಪಂ ಸರ್ವ ಸದಸ್ಯರು ಹಾಗೂ ಪೌರ ಕಾರ್ಮಿಕರು ಇದ್ದರು.