ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಳಪಡುವ ಪೌರ ಕಾರ್ಮಿಕರ ಬಹುದಿನಗಳ ಬೇಡಿಕೆ ಆಗಿದ್ದ, ಯೂನಿಫರ್ಮ್ ಕಲರ್ ಬದಲಾವಣೆಗೆ ಪಾಲಿಕೆ ಅಳೆದು ತೂಗಿ ಇದೀಗ ಅಸ್ತು ಎಂದಿದೆ.ಅಲ್ಲದೇ ಸಮವಸ್ತ್ರ ಕಲರ್ ಬದಲಾವಣೆ ಮಾಡಿ ಸಮವಸ್ತ್ರ ಕೊಡಲು ಯಾವುದೇ ಟೆಂಡರ್ ಕರೆದಿಲ್ಲ, ನೇರವಾಗಿ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಿಂದ 16_ಸಾವಿರ ಪೌರ ಕಾರ್ಮಿಕರಿಗೂ ಒಬ್ಬರಿಗೆ ಎರಡು ಜೊತೆಯಂತೆ ಒಟ್ಟು 7,25,67,549. ರೂಗಳಲ್ಲಿ ಬಟ್ಟೆ ಖರೀದಿಸಲು ಬಿಬಿಎಂಪಿ ಮುಂದಾಗಿದೆ.
ಇನ್ನೂ ಡಾ,ಬಿ,ಆರ್ ಅಂಬೇಡ್ಕರ್ ಅವರ ಹಾಕುತ್ತಿದ್ದ ಉಡುಪಿನ ಬಣ್ಣದ ಯೂನಿಫರ್ಮ್ ಗಾಗಿ ಹಲವಾರು ಬಾರಿ ಬಿಬಿಎಂಪಿಗೆ ಮನವಿ ಮಾಡಿದ್ದ ಪೌರ ಕಾರ್ಮಿಕರಿಗೆ ಇದೀಗ ಇದೇ ಆಗಸ್ಟ್ 15_ರಂದು ಮಹಿಳಾ ಪೌರ ಕಾರ್ಮಿಕರಿಗೆ ಎರಡು ಜೊತೆ ನೀಲಿ ಬಣ್ಣದ ಎರಡು ಸೀರೆ, ಬ್ಲೌಸ್ ಸೇರಿದಂತೆ ಈ ಬಾರಿ ಸ್ಪೇಟರ್ ಮತ್ತು ಕ್ಯಾಪ್ ನೀಡಲು ಪಾಲಿಕೆ ಸಿದ್ದತೆ ನಡೆಸಿದೆ,
ಇತ್ತ ಪುರುಷ ಪೌರ ಕಾರ್ಮಿಕರಿಗೂ ಕೂಡಾ ಎರಡು ಜೊತೆ ನೀಲಿ ಬಣ್ಣದ ಪ್ಯಾಂಟ್, ಟೀಶರ್ಟ್ ಸೇರಿದಂತೆ ಅವರಿಗೂ ಕೂಡ ಸ್ಪೇಟರ್ ಮತ್ತು ಕ್ಯಾಪ್ ನೀಡಲು ಬಿಬಿಎಂಪಿ ಮುಂದಾಗಿರುವುದು ಖುಷಿ ವಿಚಾರ.. ಆದ್ರೆ ಇದರ ಜೊತಗೆ ಪೌರ ಕಾರ್ಮಿಕರಿಗೆ ಶೂ, ಹ್ಯಾಂಡ್ ಗ್ಲೋಸ್ ನೀಡಿದರೆ ಮತ್ತಷ್ಟು ಅನುಕೂಲ ಆಗಲಿದೆ.