ವಿದ್ಯಾರ್ಥಿಗಳಿಂದ ಸ್ವಚ್ಛತಾ ಪ್ರತಿಜ್ಞೆ

0
Cleanliness pledge by students
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನಾಚರಣೆಯ ಅಂಗವಾಗಿ ರಾಜ್ಯ ಸರಕಾರದ ಆದೇಶದಂತೆ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಗೂ ಕಾಲೇಜಿನ ಪ್ರಾಚಾರ್ಯ ಕೆ.ಎನ್. ರೇವಣಕರ ಅವರು ಸ್ವಚ್ಛತಾ ಪ್ರತಿಜ್ಞೆಯನ್ನು ಸ್ವೀಕರಿಸಿದರು.

Advertisement

ಭಾರತ ದೇಶ ಸ್ವಚ್ಛ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಿರಬೇಕೆಂದು ಕನಸು ಕಂಡು, ಭಾರತ ಮಾತೆಗೆ ಸ್ವಾತಂತ್ರ‍್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯ ಮಾತುಗಳನ್ನು ನೆನದು, ನನ್ನನ್ನ ನಾನು ಸ್ವಚ್ಛತೆಗೆ ಅರ್ಪಿಸಿಕೊಳ್ಳುವದರ ಜೊತೆಗೆ ಉಳಿದವರನ್ನೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಹಾಗೆ ಮಾಡುತ್ತೇನೆ ಎಂದು ಪ್ರತಿಜ್ಞೆ ಸ್ವೀಕರಿಸಿದರು.

ಕಾಲೇಜಿನ ಸಿಬ್ಬಂದಿ ಜಗದೀಶ ಕೆ.ನರಗುಂದ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಲೇಜಿನ ಎನ್.ಎಸ್.ಎಸ್ ಘಟಕದ ಮುಖ್ಯಸ್ಥ ಆರ್.ಎಸ್. ಲಾಯದಗುಂದಿ ಮಾತನಾಡಿದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಎಲ್.ಎಸ್. ಪಾಟೀಲ, ಆರ್.ಸಿ. ಕೋಟಿ, ಆರ್.ಎಸ್ ಪವಾರ, ರಾಜು ಬೆನಕನಕೊಂಡ, ಗಿರೀಶ ಹಳ್ಳಕೇರಿ, ಎ.ಪಿ. ಜಿನಗಿ ಮತ್ತು ಉಪನ್ಯಾಸಕರಾದ ಎ.ಎಮ್. ಮುಲ್ಲಾ, ಎಫ್.ಬಿ. ಮನಿಯಾರ, ಕಾರ್ಯಾಲಯದ ಸಿಬ್ಬಂದಿಗಳಾದ ಎಸ್.ಎಮ್. ಬಿಜಾಪೂರ, ಎಮ್.ಜೆ. ಹೀರೆಹಾಳ, ಎಮ್.ಆರ್. ಕಾಗದಗಾರ, ಕೆ.ಎಮ್. ಬೋಡ್ಲೆಖಾನ, ಎಮ್.ಎಮ್. ಮುಜಾವರ, ಇಸಾಖ ಎಮ್. ಮುಲ್ಲಾ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here