ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸ್ವಚ್ಛತೆಯೇ ಸೇವೆ ಎನ್ನುವ ಕೇಂದ್ರ ಸರಕಾರದ ಮಹತ್ವದ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಎಂದು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗ ಕಲಾ ಹಾಗೂ ವಾಣಿಜ್ಯ ಪದವಿ ಮಹಿಳಾ ವಿದ್ಯಾಲಯದ ಪ್ರಾಚಾರ್ಯ ವಿಜಯಕುಮಾರ ಬಿಳೇಯಲಿ ಹೇಳಿದರು.
ಅವರು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗ ಕಲಾ ಹಾಗೂ ವಾಣಿಜ್ಯ ಪದವಿ ಮಹಿಳಾ ವಿದ್ಯಾಲಯದ ಎನ್‌ಎಸ್‌ಎಸ್ ಘಟಕದಡಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಲ್ಲಿ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡ ಸಂದರ್ಭದಲ್ಲಿ ಮಾತನಾಡಿ, ಸ್ವಚ್ಛತೆ ಪ್ರತಿಯೊಬ್ಬ ಪ್ರಜೆಯ ಮಂತ್ರವಾಗಬೇಕು. ಅಂದಾಗ ಮಾತ್ರ ಆರೋಗ್ಯಕರ, ಸ್ವಾಸ್ಥ, ಸುಂದರ ಸಮಾಜ-ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಈ ವೇಳೆ ಎನ್‌ಎಸ್‌ಎಸ್ ಘಟಕದ ಅಧಿಕಾರಿಗಳಾದ ಪರಮೇಶ್ವರ ತಡಹಾಳ, ರಶ್ಮಿ ಮೇಲಗಿರಿ, ಪ್ರಕಾಶ ಹರ್ಲಾಪುರ, ಶರಣಬಸವ ಅಣ್ಣಿಗೇರಿ, ಸಂಜೀವ ಬಾರಕೇರ, ದೈಹಿಕ ನಿರ್ದೇಶಕ ರೇವಂತ ಕ್ಷತ್ರಿಯ, ನಿಂಗರಾಜ ಕುಂಬಾರ, ಸವಿತಾ ಪವಾಡಣ್ಣವರ, ಮಲ್ಲಿಕಾರ್ಜುನ ಶಿವಣ್ಣವರ, ಮಂಜುನಾಥ ಹುಲಗೂರ, ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



