ವಿಜಯಸಾಕ್ಷಿ ಸುದ್ದಿ, ಗದಗ: ಸದ್ಗುರು ಶ್ರೀ ಸಿದ್ಧಾರೂಡ ಸ್ವಾಮಿಗಳವರ ದಿವ್ಯ ಜ್ಯೋತಿ ಗದುಗಿನಲ್ಲಿ ಸಂಚರಿಸುವ ಮಾರ್ಗಸೂಚಿ ರಸ್ತೆಗಳಾದ ಟ್ಯಾಗೋರ್ ರಸ್ತೆಯಿಂದ ವೆಂಕಟೇಶ್ ಟಾಕೀಸ್ ರಸ್ತೆ, ಡಾ. ಪಂಡಿತ್ ಪುಟ್ಟರಾಜ್ ಗವಾಯಿಗಳ ಆಶ್ರಮ, ಎಪಿಎಂಸಿ, ಬುಳ್ಳ ಪ್ಲಾಟ್ ಮುಖಾಂತರ ಭೂಮ್‌ರೆಡ್ಡಿ ಸರ್ಕಲ್, ಕೆ.ಎಚ್. ಪಾಟೀಲ್ ಸರ್ಕಲ್, ಬಸವೇಶ್ವರ ಸರ್ಕಲ್, ಹತ್ತಿಕಾಳ ಕೂಟ, ಮೈಕ್ರೋ ಸ್ಟೇಷನ್ ಮುಖಾಂತರ ಕಳಸಾಪುರ ರಸ್ತೆ., ಡಂಬಳ್ ನಾಕಾ ಸರ್ಕಲ್, ಶಿವಾನಂದಮಠ ಮುಖಾಂತರ ನೀಲಮ್ಮ ತಾಯಿ ಆಶ್ರಮ ರಸ್ತೆಗಳ ಸ್ವಚ್ಛತಾ ಕಾರ್ಯವನ್ನು ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತರು ಸ್ವತಃ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರು, ಹೊರಗುತ್ತಿಗೆ ಲೋಡರ್ಸ್, ಸ್ವ-ಸಹಾಯ ಗುಂಪುಗಳ ಹಾಜರಾತಿ ಪರಿಶೀಲನೆ ಮಾಡಿದರು. ಗೈರು ಹಾಜರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಆದೇಶಿಸಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಸಭೆ ಪರಿಸರ ಅಭಿಯಂತರ ಆನಂದ್ ಬದಿ, ಆರೋಗ್ಯ ನಿರೀಕ್ಷಕ ಎಂ.ಎಂ. ಮಂಕಾದಾರ್, ಮೋಟಾರ್ ಶೆಡ್ ಸೂಪರ್ವೈಸರ್ ಕೆಂಚಪ್ಪ ಪೂಜಾರ್, ಸಿ.ಆರ್. ಹಾದಿಮನಿ, ಸಣ್ಣಪ್ಪ ಬೋಳಮ್ಮನವರ್, ಹೇಮೇಶ್ ಯಟ್ಟಿ, ಪರಶುರಾಮ್ ಪೂಜಾರಿ, ಅರ್ಜುನ್ ದೊಡ್ಡಮನಿ, ಮೃತುಂಜಯ ದೊಡ್ಡಮನಿ, ಮುತ್ತು ಚಲವಾದಿ ಮುಂತಾದವರಿದ್ದರು.