ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಚನ್ನಮ್ಮ ಸರ್ಕಲ್ ಹತ್ತಿರ ಸಿಕ್ಕಲಿಗಾರ್ ಓಣಿ 32ನೇ ವಾರ್ಡಿನಲ್ಲಿ ಇರುವ ಸುಲಭ ಶೌಚಾಲಯ ತೆರವುಗೊಳಿಸಿ ಸಮುದಾಯ ಭವನ ನಿರ್ಮಿಸಬೇಕು ಎಂದು ಓಣಿಯ ಸ್ಥಳೀಯರು ಹಾಗೂ ಕ್ರಾಂತಿ ಸೇನಾ ಸಂಘಟನೆ ನೇತೃತ್ವದಲ್ಲಿ ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Advertisement
ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ ಮಾತನಾಡಿ, 32ನೇ ವಾರ್ಡಿನಲ್ಲಿರುವ ಈ ಶೌಚಾಲಯ ಸ್ವಚ್ಛತೆ ಇಲ್ಲದೆ ಹಾಳು ಬಿದ್ದು ವಾಸನೆ ಹರಡಿ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಕಾರಣ, ಈ ಸುಲಭ ಶೌಚಾಲಯ ತೆರವುಗೊಳಿಸಿ ಸಮುದಾಯ ಭವನ ನಿರ್ಮಿಸಬೇಕೆಂದು ವಿನಂತಿಸಿದರು.
ರಾಮಣ್ಣ ನವಲಗುಂದ ಮಾತನಾಡಿ, ೩೨ನೇ ವಾರ್ಡಿನ ಜನರಿಗೆ ಯಾವುದೇ ಸಮುದಾಯ ಭವನ ಇಲ್ಲದೆ ಶುಭ ಕಾರ್ಯಗಳನ್ನು ನಡೆಸಲು ಅನುಕೂಲಗಳಿಲ್ಲ. ಕಾರಣ, ಸಮುದಾಯ ಭವನ ನಿರ್ಮಾಣವಾದರೆ ಅನುಕೂಲವಾಗುತ್ತದೆ ಎಂದರು.