ಉತ್ತರಾಖಂಡ:– ಮೇಘಸ್ಫೋಟದಿಂದ 4 ಜನರು ಸಾವನ್ನಪ್ಪಿದ್ದು, ಇಬ್ಬರು ನಾಪತ್ತೆಯಾಗಿರುವ ಘಟನೆ ಉತ್ತರಾಖಂಡದಲ್ಲಿ ಜರುಗಿದೆ.
Advertisement
ಘಟನೆಯಲ್ಲಿ ಹಲವಾರು ಕುಟುಂಬಗಳು ಅವಶೇಷಗಳ ಕೆಳಗೆ ಸಿಲುಕಿಕೊಂಡಿವೆ. ಇದಾದ ನಂತರದ ಭೂಕುಸಿತದಿಂದ ಸುಮಾರು 40 ಕುಟುಂಬಗಳು ಅವಶೇಷಗಳ ಅಡಿಯಲ್ಲಿ ಸಮಾಧಿಯಾಗಿವೆ. ಅವರ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.
ಉತ್ತರಾಖಂಡದಲ್ಲಿ ಚಮೋಲಿ, ರುದ್ರಪ್ರಯಾಗ, ತೆಹ್ರಿ ಮತ್ತು ಬಾಗೇಶ್ವರ್ ನೈಸರ್ಗಿಕ ವಿಕೋಪದಿಂದ ತೀವ್ರವಾಗಿ ಹಾನಿಗೊಳಗಾದ ಜಿಲ್ಲೆಗಳಲ್ಲಿ ಸೇರಿವೆ ಎನ್ನಲಾಗಿದೆ.