ವಿಜಯಸಾಕ್ಷಿ ಸುದ್ದಿ, ಗದಗ : ನಾಗಾವಿ ಗ್ರಾ.ಪಂ ವ್ಯಾಪ್ತಿಯ ಸಿದ್ರಾಮೇಶ್ವರ ನಗರದ (ನಾಗಾವಿ ತಾಂಡಾ) ಬೆಳಧಡಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವು ಇಲ್ಲಿನ ಸ.ಹಿ.ಪ್ರಾ. ಶಾಲೆ ಸಿದ್ರಾಮೇಶ್ವರ ನಗರದಲ್ಲಿ ನಡೆಯಿತು.
ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಟಿ.ಎಸ್. ಪವಾರ, ಬಿ.ಆರ್.ಸಿ. ಸಮನ್ವಯ ಅಧಿಕಾರಿ ಜೆ.ಎ. ಭಾವಿಕಟ್ಟಿ, ವಿ.ಸಿ. ನರೇಗಲ್‌ಮಠ, ಬಿ.ವಾಯ್. ಹುಡೇದಮನಿ, ಸಿ.ಆರ್.ಪಿ.ಗಳು ಭಾಗವಹಿಸಿದ್ದರು.
ಎಸ್.ವಿ. ದಂಡಗಿ ಪ್ರಾರ್ಥಿಸಿದರು. ಶಾಲೆಯ ಮುಖ್ಯೋಪಾಧ್ಯಾಯೆ ವಾಯ್.ಬಿ. ರೇವಣಕಿ ಸ್ವಾಗತಿಸಿದರು. ಪಿ.ಐ. ತಳೆವಾಡ ಹಾಗೂ ಎಸ್.ಬಿ. ಕದಾಂಪೂರ ಕಾರ್ಯಕ್ರಮ ನಿರೂಪಿಸಿದರು. ಕ್ಲಸ್ಟರಿನ ಸಿ.ಆರ್.ಪಿ ಸಿ.ಬಿ. ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಗ್ರಾ.ಪಂ ಅಧ್ಯಕ್ಷ ಸುರೇಶ ಪವಾರ ಹಾಗೂ ಹಿರಿಯರಾದ ಕುಬೇರಪ್ಪ ರಾ. ರಾಠೋಡ, ಯಮನಪ್ಪ ಬಾಗಲಕೋಟ, ಗೌರಿ ತೋಟದ, ಕವಿತಾ ಪವಾರ, ಮೀರಾಬಾಯಿ ಲಮಾಣಿ, ಎಸ್‌ಡಿಎಂಸಿ ಅಧ್ಯಕ್ಷ ಸೋಮಪ್ಪ ಪವಾರ, ಉಪಾಧ್ಯಕ್ಷೆ ಸಂಗೀತಾ ಚವ್ಹಾಣ, ಸದಸ್ಯರು ಸೇರಿ ಪಂದ್ಯಾಟವನ್ನು ಯಶಸ್ವಿಗೊಳಿಸಿದರು.